ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭೈರತಿ ರಣಗಲ್ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಚೆನ್ನಾಗಿರುವುದರಿಂದ ಜನ ಥಿಯೇಟರ್‌ಗೆ ಬರುತ್ತಿದ್ದಾರೆ ಎಂದು ನಟ ಶಿವರಾಜಕುಮಾರ್ #Shivarajkumar ಸಂತಸ ವ್ಯಕ್ತಪಡಿಸಿದರು.
ಭೈರತಿ ರಣಗಲ್ #Bairathi Ranagal ಚಿತ್ರ ಪ್ರದರ್ಶನವಾಗುತ್ತಿರುವ ನಗರದ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ನಟ ಶಿವ ರಾಜ್‌ಕುಮಾರ್ ಅವರು ಪತ್ನಿ ಗೀತಾರೊಂದಿಗೆ ಭೇಟಿ ನೀಡಿ ಮಾತನಾಡಿದರು.

Also read: ಕೋಟೆಗಂಗೂರು ಗ್ರಾಪಂ ಉಪಚುನಾವಣೆ | ರಮೇಶ್’ಗೆ ಭರ್ಜರಿ ಗೆಲುವು
ನ. 29 ರಿಂದ ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಅಭಿಮಾನಿಗಳನ್ನು ಭೇಟಿ ಮಾಡುವ ಸಲುವಾಗಿ ರಾಜ್ಯದ ವಿವಿಧಡೆ ಪ್ರವಾಸ ನಡೆಸುತ್ತಿದ್ದೇನೆ. ಈಗಾಗಲೇ ಹಲವೆಡೆ ಪ್ರವಾಸ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧಡೆ ಪ್ರವಾಸ ಹೋಗುತ್ತಿದ್ದೇವೆ. ಹೊರ ದೇಶ ಯುಎಸ್, ದುಬೈ, ಜರ್ಮನಿ ಎಲ್ಲಾ ಕಡೆ ಒಳ್ಳೆಯ ಓಪನಿಂಗ್ ತೆಗೆದುಕೊಂಡಿದೆ ಎಂದು ಹೇಳಿದರು.
ಇದು ಬಹಳ ಆಳವಾದ ಸಿನಿಮಾ, ಜನಗಳಿಗೆ ಮುಟ್ಟುವ ಸಿನಿಮಾವಾಗಿದೆ. ಇಲ್ಲಿ ಬಹಳ ಸೂಕ್ಷ್ಮವಾದ ಪಾಯಿಂಟ್ಸ್ಗಳಿವೆ. ಈ ಚಿತ್ರವನ್ನು ನಾವು ಕಮರ್ಷಿಯಲ್‌ಗಾಗಿ ಮಾಡಿದ್ದಲ್ಲ. ಚಿತ್ರದಲ್ಲಿ ಮನರಂಜನೆ ಜೊತೆಗೆ ಒಳ್ಳೆಯ ಪಾಯಿಂಟ್‌ಗಳಿವೆ. ಮುಂದಿನ ಚಿತ್ರ 45 ಪೂರ್ಣಗೊಂಡಿದೆ. ರಿಲೀಸ್‌ಗೆ ರೆಡಿ ಇದೆ. ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದೆ ಎಂದರು.

ತಮ್ಮ ಸದ್ಯದ ಆರೋಗ್ಯದ ಪರಿಸ್ಥಿತಿ ಕುರಿತು ಪ್ರಶ್ನೆ ಎಂದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ, ನಾನು ಸದ್ಯ ಆರೋಗ್ಯವಾಗಿದ್ದೇನೆ. ಮುಂದಿನ ತಿಂಗಳು ಚಿಕಿತ್ಸೆಗಾಗಿ ಯುಎಸ್‌ಗೆ ಹೊಗಿ ಬಂದು ಜನವರಿಯಿಂದ ಪುನಃ ಶೂಟಿಂಗ್‌ನಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post