ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ದಿನ ಪುಣ್ಯದ ದಿನವಾಗಿದ್ದು 3 ವಿಚಾರಗಳಲ್ಲಿ ನನಗೆ ಆನಂದ ತಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ K S Eshwarappa ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ Rama Mandira ಪುನರ್ ಪ್ರತಿಷ್ಠೆ ಮಾಡುವ ಕನಸು ನನಸಾಗಿದೆ. ಔರಂಗಜೇಬ ಕಾಶಿ ವಿಶ್ವನಾಥ ದೇವಸ್ಥಾನವನ್ನು ದ್ವಂಸ ಮಾಡಿ ಕಟ್ಟಿದ ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಅವಕಾಶವನ್ನು ನ್ಯಾಯಾಲಯ ನೀಡಿದೆ. 3ನೇದಾಗಿ ರಾಜಕೀಯ ಭೀಷ್ಮ ಇಡೀ ದೇಶದ ಬಿಜೆಪಿ ಕಾರ್ಯಕರ್ತರನ್ನು ಸಂಘಟನೆಯಲ್ಲಿ ತೊಡಗಿಸಿ ರಾಮಮಂದಿರ ಹೋರಾಟಕ್ಕೆ ರಥಯಾತ್ರೆ ಮೂಲಕ ಇಡೀ ದೇಶವನ್ನು ಒಗ್ಗೂಡಿಸಿದ ಎಲ್.ಕೆ. ಅಡ್ವಾಣಿಯವರಿಗೆ L K Advani ಭಾರತ ರತ್ನ Bharat Rathna ದೊರೆತಿರುವುದು ಸಂತೋಷ ತಂದಿದೆ ಎಂದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದಾಗ, ದೆಹಲಿಯಿಂದ ನನಗೆ ದೂರವಾಣ ಬರುತ್ತದೆ. ಎಲ್.ಕೆ.ಅಡ್ವಾನಿ ಮತ್ತು ಅಟಲ್‌ಬಿಹಾರಿ ವಾಜಪೇಯಿ ಬೆಂಗಳೂರಿಗೆ ಬರುತ್ತಿದ್ದಾರೆ. ದಕ್ಷಿಣ ಭಾರತದ ಪದಾಧಿಕಾರಿಗಳಿಗೆ 3 ದಿನದ ತರಬೇತಿ ಇದ್ದು, ಕೇವಲ 50 ಜನರಿಗೆ ಆ ಇಬ್ಬರು ಮಹಾನಾಯಕರು ದೇಶದ ಸಿದ್ದಾಂತ, ಸಂಘಟನೆ ಮತ್ತು ಹೋರಾಟದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲಿ ನಾನು ಒಬ್ಬ ಎಂಬುವುದು ನನ್ನ ಸೌಭಾಗ್ಯ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಪ್ರತಿಯೊಬ್ಬ ಕಾರ್ಯಕರ್ತನನ್ನು ಹೆಸರಿಡಿದು ಆತನನ್ನು ಗೌರವಿಸಿ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವಂತೆ ಈ ಇಬ್ಬರು ಬಿಜೆಪಿ ನಾಯಕರು ಮಾರ್ಗದರ್ಶನ ಮಾಡುತ್ತಿದ್ದರು ಎಂದರು.
Also read: ಮಕ್ಕಳ ಸಂತೆ: ವ್ಯಾಪಾರದ ಅನುಭವ ಪಡೆದ ವಿದ್ಯಾರ್ಥಿಗಳು
ಸ್ಥಾನಮಾನ ಸಿಕ್ಕಿಲ್ಲ, ಟಿಕೇಟ್ ಸಿಕ್ಕಿಲ್ಲ ಎಂದು ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಗಳನ್ನು ನಾವು ನೋಡುತ್ತೇವೆ. ಆದರೆ, ಬಿಜೆಪಿಯ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಮುಂಬೈನಲ್ಲಿ ಮುಂದಿನ ಪ್ರಧಾನಿ ಯಾರು ಎಂಬ ಚರ್ಚೆ ನಡೆಯಿತ್ತಿರುವ ಸಂದರ್ಭದಲ್ಲಿ ಅಟಲ್‌ಜೀ ಹೆಸರು ಮತ್ತು ಅಡ್ವಾನಿ ಹೆಸರು ಕೇಳಿಬರುತ್ತಿತ್ತು. ಅಂದಿನ ಸಭೆಯಲ್ಲಿ ಮೊದಲು ಮಾತನಾಡಿದ ಅಡ್ವಾನಿಯವರು ಅಟಲ್‌ಜೀ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಯೇ ಬಿಟ್ಟರು. ಅದು ಪ್ರತಿಯೊಬ್ಬ ಕಾರ್ಯಕರ್ತನ ಹೃದಯದಲ್ಲಿ ಅವರ ತ್ಯಾಗ ಮತ್ತು ಸ್ನೇಹ ಸಂಬಂಧ ಹಾಗೂ ಬಿಜೆಪಿಯ ನಾಯಕರ ಮನಸ್ಥಿತಿ ಮನಸ್ಸಿನಲ್ಲಿ ಬೇರೂರಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಸರ್ವಾಧಿಕಾರದಿಂದ ಭಾರತ್ ಮಾತಾ ಕೀ ಜೈ ಎಂದ ಎಲ್.ಕೆ. ಅಡ್ವಾನಿ, ಅಟಲ್‌ಜೀ ಸೇರಿದಂತೆ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಜೈಲಿಗಟ್ಟಿದ್ದರು. ಆದರೆ, ನಿನ್ನೆ ಖರ್ಗೆಯವರು ಮೋದಿ ಸರ್ವಾಧಿಕಾರಿ ಎಂದು ಹೇಳಿದಾಗ ತುರ್ತು ಪರಿಸ್ಥಿತಿಯ ನೆನಪಾಯಿತು. ಖರ್ಗೆಯವರು ಇಂದಿರಾಗಾಂಧಿಯ ಸರ್ವಾಧಿಕಾರವನ್ನು ಒಮ್ಮೆ ನೆನಪಿಸಿಕೊಳ್ಳಲಿ ಎಂದರು.
ಈಶ್ವರಾನಂದಪುರಿ ಸ್ವಾಮೀಜಿಗಳಿಗೆ ಚೆನ್ನಕೇಶವ ದೇವಾಲಯದ ಗರ್ಭಗುಡಿಯಲ್ಲಿ ಪೂಜೆ ಮಾಡಿ ತೆರಳಿದ ನಂತರ ಅಲ್ಲಿನ ಅರ್ಚಕರು ಸ್ವಚ್ಛತೆ ಮಾಡಿದ್ದಾರೆ ಎಂದು ನೋವನ್ನು ತೋಡಿಕೊಂಡಿರುವುದು ನನ್ನ ಗಮನಕ್ಕೆ ಬಂದಿದ್ದು, ಅರ್ಚಕರು ಈ ಬಗ್ಗೆ ಸ್ಪಷ್ಟನೆ ನೀಡಿ ನಾವು ಈಶ್ವರಾನಂದ ಪುರಿ ಶ್ರೀಗಳಿಗೆ ಸಕಲ ಗೌರವ ನೀಡಿದ್ದೇವೆ. ಅವರು ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುವುದು ನಮಗೆ ತಿಳಿಯದು ಎಂದಿದ್ದಾರೆ.
ಶ್ರೀಗಳು ಕನಕದಾಸರ ಅನುಯಾಯಿಗಳು ಆಗಿದ್ದು, ಈ ರೀತಿಯ ಪ್ರಮಾದವಾಗಿದ್ದರೆ ಅದು ಇಡೀ ಹಿಂದೂ ಸಮಾಜಕ್ಕೆ ನೋವಿನ ಸಂಗತಿಯಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಯಲಿಗೇಳೆಯಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post