ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾಸಂಘ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಸಭೆ ಕರೆಯಲಾಗಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು Bekkinakalmutt ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.27ರಂದು ಬೆಳಿಗ್ಗೆ 10:30ಕ್ಕೆ ಸೋಮಿನಕೊಪ್ಪ ರಸ್ತೆಯ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರವ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಸಮಗ್ರ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಈ ಸಭೆ ಕರೆದಿದ್ದು, ಸಮಾಜ ಬಾಂಧವರು, ಪ್ರಮುಖರು ಹಾಗೂ ವೀರಶೈವಲಿಂಗಾಯತ ಜನಪ್ರತಿನಿಧಿಗಳು ಆಗಮಿಸಬೇಕೆಂದು ಸಮಾಜದ ಪರವಾಗಿ ಕೋರಿದ್ದಾರೆ.

Also read: ಶಿವಮೊಗ್ಗದ ವಾಹನ ಸವಾರರೇ ಅರ್ಧ ಹೆಲ್ಮೆಟ್ ಹಾಕ್ತೀರಾ? ಹಾಗಾದ್ರೆ ಈ ತುರ್ತು ಸುದ್ದಿ ಓದಿ
ರಾಜ್ಯ ಸರ್ಕಾರ ಕೂಡಲೇ ಈ ಬೇಡಿಕೆಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಈ ಸಮಾವೇಶದಲ್ಲಿ ನೂರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮಠಾಧೀಶರು ಪಾಲ್ಗೊಳ್ಲುತ್ತಾರೆ ಸುಮಾರು 5 ಸಾವಿರ ಜನರು ಈ ಸಮಾವೇಶದಲ್ಲಿ ಸೇರುವ ನಿರೀಕ್ಷೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಕೃತಿ ಎಂಎಯಲ್ಲಿ ಎರಡು ಸ್ವರ್ಣ ಪದಕ ಪಡೆದ ಬೆಕ್ಕಿನಕಲ್ಮಠದ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿ ಮುದ್ದುವೀರೇಶ್ ಅವರನ್ನು ಅಭಿನಂದಿಸಲಾಯಿತು.
ಗೋಷ್ಠಿಯಲ್ಲಿ ಬಿಳಕಿ ಮಠದ ಶ್ರೀಗಳು, ಜಡೆಸಂಸ್ಥಾನದ ಶ್ರೀಗಳು ಪ್ರಮುಖರಾದ ಎಸ್‌ಪಿ ದಿನೇಶ್, ಜ್ಯೋತಿ ಪ್ರಕಾಶ್, ಸುಭಾಶ್, ಎನ್. ಜೆ ರಾಜಶೇಖರ್, ಟಿ.ಬಿ. ಜಗದೀಶ್, ರುದ್ರೇಶ್, ಮಹೇಶ್‌ಮೂರ್ತಿ, ಮಹಾಲಿಂಗಶಾಸ್ತ್ರಿ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post