ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳ ಅವಶ್ಯಕತೆಯಿದ್ದು ಇದರಿಂದ ಭಾರತದಲ್ಲಿ ಅಭಿವೃದ್ದಿಶೀಲ ದೊಡ್ಡ ಕ್ರಾಂತಿಯಾಗಲಿದೆ ಎಂದು ವಿಧಾನ ಪರಿ?ತ್ತಿನ ಸದಸ್ಯರಾದ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು
ಮಂಗಳವಾರ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಎನ್.ಇ.ಎಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ ಡಿ.ಎಸ್. ಅರುಣ್ ಅವರಿಗೆ ಹಾಗೂ 2021 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ಕ್ಷೇತ್ರಕ್ಕೆ ಬರುವಾಗ ಅನೇಕ ಆಶಯಗಳನ್ನು ಹೊತ್ತುಕೊಂಡು ಬಂದಿದ್ದೇನೆ. ಜನಪ್ರತಿನಿಧಿಗಳ ಜನಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದೇನೆ. ಇಂದಿಗೂ ಕೂಡ ಹಲವಾರು ಹಳ್ಳಿಗಳು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದುಸರ್ಕಾರದ ಯೋಜನೆಗಳನ್ನು ಪ್ರತಿಯೊಂದು ಹಳ್ಳಿಗಳಿಗೆ ವ್ಯವಸ್ಥಿತವಾಗಿ ತಲುಪಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಎನ್.ಇ.ಎಸ್ ಸಂಸ್ಥೆ ಮಲೆನಾಡಿನ ಭಾಗದಲ್ಲಿ ಶೈಕ್ಷಣಿಕವಾಗಿ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇಂತಹ ಕೊಡುಗೆಗಳನ್ನು ನೀಡುವುದರ ಜೊತೆಗೆ ಕರ್ನಾಟಕದಲ್ಲಿಯೇ ಪ್ರಸಿದ್ದಿ ಹೊಂದಲು ಸಂಸ್ಥೆಯ ಸದಸ್ಯರ ಜೊತೆಗೆ ಅಲ್ಲಿನ ನೌಕರರ ವೃಂದದ ಸಹಕಾರವು ಎಂದೆಂದಿಗೂ ಸ್ಮರಣೀಯ ಎಂದು ಹೇಳಿದರು.
ಎನ್.ಇ.ಎಸ್ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ ಮಾತನಾಡಿ ಸಂಸ್ಥೆಯ ಅಭಿವೃದ್ದಿಶೀಲ ವಾತಾವರಣ ನಿರ್ಮಾಣ ಮಾಡುವಲ್ಲಿ ಸಿಬ್ಬಂದಿಗಳ ಪಾತ್ರ ಮಹತ್ವದಾಗಿರುತ್ತದೆ. ತಮ್ಮ ಬಹುತೇಕ ಜೀವಿತಾವಧಿಯನ್ನು ಸಂಸ್ಥೆಗಾಗಿ ಧಾರೆಯೆರೆದ ನೌಕರರ ಸೇವೆಯನ್ನು ಸಂಸ್ಥೆ ಸದಾ ಗೌರವಿಸುತ್ತದೆ ಎಂದು ಹೇಳಿದರು.
ಎನ್.ಇ.ಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ಸಿಬ್ಬಂದಿಗಳ ಪರಿಶ್ರಮದಿಂದಲೇ ಸಂಸ್ಥೆಯ ಯಶಸ್ಸು ಸಾಧ್ಯ. ನಮ್ಮ ಸಂಸ್ಥೆಯಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ವಿಶೇಷ ಸ್ಥಾನಮಾನವಿದೆ. ಇಲ್ಲಿ ಯಾವುದೇ ವರ್ಗಿಕರಣವಿರುವುದಿಲ್ಲ. ಒಮ್ಮೆ ನಮ್ಮ ಸಂಸ್ಥೆಗೆ ಉದ್ಯೋಗಕ್ಕೆ ಸೇರಿದ ವ್ಯಕ್ತಿ ಮಧ್ಯದಲ್ಲಿಯೇ ಬಿಟ್ಟು ಹೋಗುವುದು ವಿರಳ. ಹಲವಾರು ವ?ಗಳ ಸೇವೆಯನ್ನು ಸಲ್ಲಿಸಿದ ನೌಕರರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್. ನಾಗರಾಜ, ನಿರ್ದೇಶಕರಾದ ಡಾ.ಪಿ. ನಾರಾಯಣ್, ಜಿ.ಎಸ್. ನಾರಾಯಣರಾವ್, ಎನ್.ಟಿ. ನಾರಾಯಣರಾವ್, ಹೆಚ್.ಸಿ. ಶಿವಕುಮಾರ್, ರುಕ್ಮಿಣಿ ವೇದವ್ಯಾಸ, ಶಂಕರರಾವ್, ಕುಲಸಚಿವರಾದ ಪ್ರೋ.ಹೂವಯ್ಯಗೌಡ, ಸಹಾಯಕ ಕುಲಸಚಿವರಾದ ಪ್ರೋ. ಹರಿಯಪ್ಪ, ಅಜೀವ ಸದಸ್ಯರಾದ ಕಿಶೋರ್ ಶಿರ್ನಾಳ್, ಗೋವಿಂದರಾಜ್, ಸುಂದರರಾಜ್, ಗುರುಪ್ರಸಾದ್, ಡಾ.ಎಸ್.ಟಿ.ಅರವಿಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಈಚೆಗೆ ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post