ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಚೇರಿ ಉದ್ಘಾಟನೆ ಆಗಿದೆ. ಕಮಲ ಅರಳುವುದು ನಿಶ್ಚಿತ, ಶುಭ ಸೂಚನೆ ಕಾಣಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಸಣ್ಣಪುಟ್ಟ ಆಸೆ ಆಮಿಷ ತೋರಿಸುವುದಿದೆ. ಬಿಜೆಪಿ ಕಾರ್ಯಕರ್ತರಿಗೆ ಯಾರು ಕೂಡಾ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕಾರ್ಯಕರ್ತರು ಕಟಿಬದ್ದರಾಗಿ ನಿಂತಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಪಟ್ಟಿ ಬಿಡುಗಡೆ ವಿಷಯ ನಮ್ಮ ಗಮನಕ್ಕೂ ಬಂದಿದೆ. ನಮ್ಮ ಹಿರಿಯರೆಲ್ಲಾ ಸೇರಿ ಸಭೆ ನಡೆಸಿದ್ದಾರೆ. ಇವತ್ತು ಒಂದೆರಡು ಗಂಟೆಯೊಳಗೆ ಪಟ್ಟಿ ಬಿಡುಗಡೆ ಆಗಲಿದೆ. ಶಿವಮೊಗ್ಗ ಜಿಲ್ಲೆಯ ಬಹುತೇಕ ಹಾಲಿ ಶಾಸಕರಿಗೆ ಟಿಕೇಟ್ ಸಿಗುವ ವಿಶ್ವಾಸ ಇದೆ ಎಂದರು.
Also read: ನಾಮಪತ್ರ ಸಲ್ಲಿಕೆ ಎಂದಿನಿಂದ? ಮತದಾರರ ಗುರುತಿನ ಚೀಟಿ, ಅಂಚೆ ಮತದಾನದ ಮಾಹಿತಿ ಇಲ್ಲಿದೆ
ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೋ, ಆ ನಿರ್ಧಾರಕ್ಕೆ ನಾವು ಬದ್ದ. ಹಾಲಿ ಶಾಸಕ ಇದ್ದೀನಿ, ಪಕ್ಷಕ್ಕೆ ಮನವಿ ಮಾಡಿಕೊಂಡಿದ್ದೇನೆ. ಮತ್ತೊಮ್ಮೆ ಅವಕಾಶ ಕೊಡುವಂತೆ ಮನವಿ ಮಾಡಿದ್ದೇನೆ. ಕಾರ್ಯಕರ್ತರ ಅಪೇಕ್ಷೆ ಇದೆ. ಶಿವಮೊಗ್ಗ ಗ್ರಾಮಾಂತರ ಜಯಭೇರಿ ಆಗಬೇಕು ಎಂಬ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.









ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 










