ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ #TungaRiver ನೀರಿಯಲ್ಲಿ ಟಿಬಿಡಿಟಿ ಪ್ರಮಾಣ ಹೆಚ್ಚಾಗಿದ್ದು, ಸಾರ್ವಜನಿಕರು ನದಿ ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಸಲಹೆ ನೀಡಲಾಗಿದೆ.
ಈ ಕುರಿತಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ಹೊರಡಿಸಿದ್ದು, ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಅ.08ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ #GajanurDam ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Also read: ಕ್ರೈಸ್ಟ್‌ಕಿಂಗ್: ಪ್ರೌಢಶಾಲಾ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಗಣ್ಯ ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆ
Discussion about this post