ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ತಡರಾತ್ರಿ 12:30ರ ಸುಮಾರಿನಲ್ಲಿ ಕಜಾಕಿಸ್ತಾನದಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ KSEshwarappa ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ನಿನ್ನೆ ರಾತ್ರಿ ವಿದೇಶದಿಂದ ಕರೆ ಬಂದಿದ್ದು, ಬೆಳಿಗ್ಗೆ ನೋಡಿದಾಗ ಮೊಬೈಲ್‌ನಲ್ಲಿ ಮಿಸ್ಡ್ ಕಾಲ್ ಇರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ Nithin Gadkari ಅವರಿಗೂ ಬೆದರಿಕೆ ಬಂದಿತ್ತು. ಈ ಕುರಿತು ಎನ್‌ಐಎ ತನಿಖೆ ಮಾಡಿ, ಸಾಹಿಲ್ ಶೇಖ್ ಎಂಬಾತನ ಬಂಧನವಾಗಿತ್ತು. ನಿನ್ನೆಯ ಮಿಸ್ಡ್ ಕಾಲ್ ಇದಕ್ಕೆ ಲಿಂಕ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಸೂಕ್ತ ತನಿಖೆ ಮಾಡುವಂತೆ ಜಿಲ್ಲಾರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಎಂ.ಎಲ್.ಸಿ. ಬೋಜೇಗೌಡ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು, ಪಕ್ಷದ ಅಭ್ಯರ್ಥಿ ಸೋತರೂ ಕ್ಷೀರಾಭಿಷೇಕ ಮಾಡಿಸಿದ್ದಾರೆ. ಇಂತಹ ಲಜ್ಜೆಗೆಟ್ಟ ರಾಜಕೀಯ ನಾನೆಂದೂ ನೋಡಿಲ್ಲ. ಅವರ ಪಕ್ಷದ ಮುಖಂಡರು ಏನು ಕ್ರಮ ಕೈಗೊಳ್ತಾರೊ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಮತದಾರರಿಗೆ ಅಭಿನಂದನೆ:
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದ್ದು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿವಮೊಗ್ಗ ಮತದಾರರು ಜಾತಿಯ ಒತ್ತಡಕ್ಕೆ ಮಣಿದಿಲ್ಲ. ಕಾರ್ಯಕರ್ತರ ಸಂಘಟನೆ ಬಿಜೆಪಿ ಗೆಲುವಿಗೆ ಕಾರಣ. ನಮ್ಮ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಜನ ಮತ ಹಾಕಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ನಾಯಕರು ಕ್ಷೇತ್ರಕ್ಕೆ ಬಂದು ಕಾರ್ಯಕರ್ತರನ್ನು ಹುರುದುಂಬಿಸಿದ್ದರು. ರಾಜ್ಯದಲ್ಲೂ ಬಿಜೆಪಿಗೆ ಹೆಚ್ಚು ಬೆಂಬಲ ಸಿಕ್ಕಿದೆ. ಸ್ಥಾನ ಕಡಿಮೆ ಇರಬಹುದು. ಆದರೆ ಮತಗಳಿಕೆಯಲ್ಲಿ ಹೆಚ್ಷಳ ಆಗಿದೆ. ಜನರು ಇಟ್ಟ ವಿಶ್ವಾಸಕ್ಕೆ ಪಕ್ಷ ಋಣಿಯಾಗಿದೆ. ಪ್ರತಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡಲಿದೆ ಎಂದರು.












Discussion about this post