ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೂವರು ಹತ್ಯೆಯಾದ ಗ್ಯಾಂಗ್ ವಾರ್ #GangWar ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ #RowdySheeter ಶೋಯೇಬ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದಲ್ಲಿ ಇಂದು ಮುಂಜಾನೆ ನಡೆದಿದೆ.
ಬೀರನಕೆರೆ ಬಳಿಯಲ್ಲಿ ಶೋಯೇಬ್ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ಹಿಡಿಯಲು ದಾಳಿ ನಡೆಸಿದ್ದಾರೆ.
ಆದರೆ, ಈ ವೇಳೆ ಆತನನ್ನು ಹಿಡಿಯಲು ಸಿಬ್ಬಂದಿ ಅಣ್ಣಪ್ಪ ಅವರು ಪ್ರಯತ್ನಿಸಿದ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಶೋಯೇಬ್ ದಾಳಿ ನಡೆಸಿದ್ದಾನೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಶರಣಾಗುವಂತೆ ಪಿಎಸ್’ಐ ಕುಮಾರ್ ಅವರ ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೇ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಶೋಯೇಬ್ ಕಾಲಿಗೆ ಗುಂಡು #Firing ಹಾರಿಸಲಾಗಿದೆ.
Also read: 75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು
ಆರೋಪಿ ಶೋಯೇಬ್ ಆದಿಲ್ ಸಹಚರನಾಗಿದ್ದು, ಈತನ ವಿರುದ್ಧ ಈ ಹಿಂದೆ ಎರಡು 307 ಪ್ರಕರಣಗಳು ಸೇರಿದಂತೆ 5 ಪ್ರಕರಣಗಳು ದಾಖಲಾಗಿವೆ. ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎರಡು ತಿಂಗಳ ಹಿಂದೆ ಕುಟುಂಬ ಸದಸ್ಯರೊಂದಿಗೆ ಎಚ್ಚರಿಕೆ ನೀಡಲಾಗಿತ್ತು.
ನಗರದ ಲಷ್ಕರ್ ಮೊಹಲ್ಲಾದಲ್ಲಿ ಕಳೆದ ವಾರ ನಡೆದ ಗ್ಯಾಂಗ್ ವಾರ್’ನಲ್ಲಿ ಮೂವರು ಬಲಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post