ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಲು ಅವರ ಪಕ್ಷದವೇ ಕಾರಣ ಕಾಂಗ್ರೆಸ್‌ನವರು ಹೇಳಿಲ್ಲ ಎಂದು ಬಿಎಸ್‌ವೈ ರಾಜೀನಾಮೆ ಕುರಿತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಧಿಕಾರದಲ್ಲಿದ್ದಾಗ ಮಾಡಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ನೋಡಿ ಅವರ ಪಕ್ಷದವರೇ ಆದ ಬಸವರಾಜ್ ಯತ್ನಾಳ್, ಯೋಗಿಶ್ ಅಂತಹವರು ಒಳತಂತ್ರಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಮಾಡಿದ್ದಾರೆ. ಬಿಎಸ್‌ವೈ ಮಾಡಿದುಣ್ಣೋ ಮಾರಾಯ ಅನ್ನುವಂತೆ ಕುರ್ಚಿಯಿಂದ ಕೆಳಗಿಳಿದ್ದಿದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದ್ದಾರೆ.

ಇನ್ನೂ ಮಠಾಧೀಶರು ಯಡಿಯೂರಪ್ಪನವರ ಪರವಾಗಿ ವಕಾಲತ್ತು ವಹಿಸುವ ಅಗತ್ಯವಿಲ್ಲ. ಸ್ವಾಮೀಜಿಗಳು ಸಮಾಜದ ಉದ್ದಾರಕ್ಕೆ ಶ್ರಮಿಸಬೇಕೆ ಹೊರತು ರಾಜಕಾರಣಕ್ಕೆ ತಲೆಹಾಕಬಾರದು ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಶಾಸಕ ಸಂಗಮೇಶ್ವರ್ ಹೇಳಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















