ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಬಿಎಸ್ಇ #CBSE ಪಠ್ಯಕ್ರಮದ 10ನೇ ತರಗತಿ ಪರೀಕೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಪಿಇಎಸ್ ಪಬ್ಲಿಕ್ ಶಾಲೆಯು ಸತತ 11ನೇ ಬಾರಿಯೂ ಪ್ರತಿಶತ 100% ಫಲಿತಾಂಶ ದಾಖಲಿಸಿದೆ.
ಒಟ್ಟು 58 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 38ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ ಪೋಷಕರು ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಓದು ವ್ಯಕ್ತಿಯನ್ನು ರೂಪಿಸುತ್ತದೆ, ಚರ್ಚೆ ಆತನನ್ನು ಸಿದ್ಧಗೊಳಿಸುತ್ತದೆ ಮತ್ತು ಬರಹ ಅಪೂರ್ಣ ವ್ಯಕ್ತಿಯನ್ನು ಪರಿಪೂರ್ಣವಾಗಿಸುವಂತೆ ನಮ್ಮ ಪ್ರೇರಣ ಪಬ್ಲಿಕ್ ಶಾಲೆಯೂ ಮಗುವನ್ನು ಸದೃಡನನ್ನಾಗಿಸಿದೆ.
ಅತ್ಯುತ್ತಮ ಅಂಕಗಳಿಸಿದ ಮಕ್ಕಳಿಗೆ ಶಾಲೆಯ ಪರವಾಗಿ ಹಾಗೂ ಆಡಳಿತ ಮಂಡಳಿಯವರ ಪರವಾಗಿ ನಮ್ಮೊಂದಿಗೆ ಸಹಕರಿಸಿದ ಪೋಷಕವರ್ಗದವರಿಗೂ ಹಾಗೂ ನೆಚ್ಚಿನ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post