ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರ್ಮಲಾ ಸೀತಾರಾಮನ್ #Nirmala Sitaraman ಮಂಡಿಸಿರುವ ಕೇಂದ್ರ ಬಜೆಟ್ #Union Budget ಬಗ್ಗೆ ಸ್ಥಳೀಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಜೆಟ್ ಕುರಿತು ಪ್ರತಿಕ್ರಿಯೆಗಳು ಹೀಗಿವೆ.
ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಉದ್ಯೋಗಕ್ಕೆ ಯಾವುದೇ ರೀತಿಯ ಒತ್ತು ನೀಡಿಲ್ಲ, ಯಾವುದೇ ರೀತಿಯ ಹೊಸ ಯೋಜನೆಗಳನ್ನು ಮಾಡಿಲ್ಲ, ಹೊಸ ರೈಲ್ವೆ ಹಳಿಗಳನ್ನು ಮಾಡಿಲ್ಲ, ಇರುವ ಹಳೇ ರೈಲ್ವೆ ಹಳಿಗಳಲ್ಲೇ ವೇಗವಾದ ರೈಲುಗಳ ಸಂಚಾರವೆAದು ಸುಳ್ಳು ಹೇಳಲಾಗಿದೆ. ಮಧ್ಯಮ ವರ್ಗದವರು ಹಾಗೂ ಕೆಳ ವರ್ಗದವರಿಗೆ ಯಾವುದೇ ರೀತಿಯ ಉತ್ಸಾಹವು ತುಂಬುವ ಯೋಜನೆಗಳಿಲ್ಲದ ಅವೈಜ್ಞಾನಿಕವಾದ ಕೇಂದ್ರ ಬಜೆಟ್ ಇದಾಗಿದೆ. 2047ರ ದೂರದೃಷ್ಟಿ ಇರುವ ಬಜೆಟ್ ಇದಾಗಿರುತ್ತದೆ ಎಂದು ಹೇಳಿದ್ದರು, ಆದರೆ 2026ರ ಈ ವರ್ಷಕ್ಕೆ ಯಾವುದೇ ರೀತಿಯ ಉತ್ತಮ ಯೋಜನೆಗಳು ಉತ್ಸಾಹವೇ ಇಲ್ಲದಂತಹ ಬಜೆಟ್ ಇದಾಗಿದ್ದು. ರಾಜ್ಯಕ್ಕೆ ಯಾವುದೇ ಕೊಡುಗೆಯನ್ನು ನೀಡಿದ ಈ ವರ್ಷದ ಬಜೆಟ್ ಹಾಗೂ ನರೇಂದ್ರ ಮೋದಿ ಸರ್ಕಾರವು ವಿಫಲಗೊಂಡಿದೆ.
-ಹೆಚ್.ಸಿ. ಯೋಗೇಶ್, ಕಾಂಗ್ರೆಸ್ ಮುಖಂಡರು.
ರಾಜ್ಯದ ಹಿತಾಸಕ್ತಿಗೆ ಮತ್ತೊಮ್ಮೆ ನಿರಾಸೆ
ಕೇಂದ್ರ ಸರ್ಕಾರವು ಮಂಡಿಸಿರುವ 2026ರ ಸಾಲಿನ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ದಶಕಗಳ ಅನ್ಯಾಯವನ್ನು ಮುಂದುವರಿಸಿದAತಿದೆ. ಮಲೆನಾಡು ಭಾಗದ ದೃಷ್ಟಿಕೋನದಿಂದ ನೋಡಿದರೆ, ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳ ಜೀವನಾಡಿಯಾದ ಅಡಿಕೆ ಮತ್ತು ಕಾಫಿ ಬೆಳೆಗಾರರ ನಿರೀಕ್ಷೆಗಳು ಸಂಪೂರ್ಣವಾಗಿ ಹುಸಿಯಾಗಿವೆ. ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗೆ ಬಾಧಿಸಿರುವ ಮಾರಕ ಎಲೆ ಚುಕ್ಕೆ ರೋಗದ ಸಂಶೋಧನೆಗೆ ಅಥವಾ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಜಿಲ್ಲೆಯ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ರೈಲ್ವೆ ಯೋಜನೆಗಳಾದ ಶಿವಮೊಗ್ಗ-ಹರಿಹರ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಗಳಿಗೆ ಈ ಬಾರಿಯೂ ನಿರೀಕ್ಷಿತ ವೇಗದಲ್ಲಿ ಅನುದಾನ ಸಿಗದಿರುವುದು ದಶಕಗಳ ಕಾಲದ ಬೇಡಿಕೆಗಳನ್ನು ಗಾಳಿಗೆ ತೂರಿದಂತಾಗಿದೆ.
-ಚೇತನ್ ಕೆ ಗೌಡ, ಅಧ್ಯಕ್ಷರು, ರಾಜ್ಯ ಜವಳಿ ಮತ್ತು ಕೈಮಗ್ಗ ನಿಗಮ
ಮಲೆನಾಡು ಯೋಜನೆಗಳಿಗೆ ನಿರ್ಲಕ್ಷ್ಯ
ಕೇಂದ್ರ ಬಜೆಟ್‌ನಲ್ಲಿ ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಜನ ಸಾಮಾನ್ಯರ ಪರವಾಗಿರಬೇಕಾದ ಬಜೆಟ್, ಕಾರ್ಪೋರೇಟ್ ಉದ್ಯಮಿಗಳ ಪರವಾಗಿದೆ. ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳ ಅಡಿಕೆ ಮತ್ತು ಕಾಫಿ ಬೆಳೆಗಾರರ ನಿರೀಕ್ಷೆಗಳು ಸಂಪೂರ್ಣವಾಗಿ ಹುಸಿಯಾಗಿವೆ. ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗೆ ಬಾಧಿಸಿರುವ ಮಾರಕ ಎಲೆ ಚುಕ್ಕೆ ರೋಗದ ಸಂಶೋಧನೆಗೆ ಅಥವಾ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಜಿಲ್ಲೆಯ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ರೈಲ್ವೆ ಯೋಜನೆಗಳಾದ ಶಿವಮೊಗ್ಗ-ಹರಿಹರ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಗಳಿಗೆ ಈ ಬಾರಿಯೂ ನಿರೀಕ್ಷಿತ ವೇಗದಲ್ಲಿ ಅನುದಾನ ಸಿಗದಿರುವುದು ಅತ್ಯಂತ ದುರಂತ.ಕರಾವಳಿ ಭಾಗಕ್ಕೆ ಮಲೆನಾಡಿನಿಂದ ನೇರ ರೈಲು ಸಂಪರ್ಕ ಕಲ್ಪಿಸುವ ಘಾಟಿ ಪ್ರದೇಶದ ಯೋಜನೆಗಳ ಬಗ್ಗೆಯೂ ಬಜೆಟ್ ಮೌನವಹಿಸಿದೆ.ನೀರಾವರಿ ಕ್ಷೇತ್ರದಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದೆ.
-ಧೀರರಾಜ್ ಹೊನ್ನವಿಲೆ, ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















