ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಂಚಾಯತ್ ರಾಜ್ ಸಚಿವಾಲಯ ಭಾರತ ಸರ್ಕಾರ ಹಾಗೂ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ಸಹಯೋಗದಲ್ಲಿ ರೇಡಿಯೋ ಶಿವಮೊಗ್ಗ #Radio Shivamogga ಜನತಾ ಜಾಗೃತಿ ಸರಣಿ ರೂಪಿಸಿದೆ. ಇದರಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಕುರಿತಾದ ಕಾರ್ಯಕ್ರಮ ಅ.10ರ ಮಧ್ಯಾಹ್ನ 3ಕ್ಕೆ ಪ್ರಸಾರವಾಗಲಿದೆ. ಇದೇ ಕಾರ್ಯಕ್ರಮ ಅ.12ರಂದು ಮಧ್ಯಾಹ್ನ 3ಕ್ಕೆ ಮರುಪ್ರಸಾರವಾಗಲಿದೆ.
ಮಕ್ಕಳಿಗೆ ಪೂರಕವಾಗಿ ಗ್ರಾಮದ ವಾತಾವರಣವನ್ನು ಹೇಗೆ ರೂಪಿಸಬೇಕೆಂದು ದುರ್ಗಾ ತಿಳಿಸಿಕೊಡಲಿದ್ದಾರೆ. ದುರ್ಗಾಳ ಚಿಂತನೆಯನ್ನು ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯ್ತಿ ಮಕ್ಕಳಲ್ಲಿ ಸಂತವನ್ನು ತಂದಿತು ಎಂಬುದನ್ನು ಅರಿತುಕೊಳ್ಳುವ ಕಾರ್ಯಕ್ರಮ ಇದಾಗಿದೆ.
Also read: ದಿವಾಕರ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ
ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ಮೆಂಟ್ ಸೊಸೈಟಿ (ಕಿಡ್ಸ್) ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕರಿಸಿವೆ. ಈ ಜನತಾ ಜಾಗೃತಿ ಕಾರ್ಯಕ್ರಮದ ಆಯೋಜನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯ್ತಿಗಳು ನಿಲಯ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ (ಮೊ:72591 76279) ಇವರನ್ನು ಸಂಪರ್ಕಿಸಬಹುದು.
ಈ ಕಾರ್ಯಕ್ರಮವನ್ನು ನಿಮ್ಮ ಮೊಬೈಲ್ ಗಳಲ್ಲೇ ಆಪ್ ನ ಮುಖಾಂತರ ಕೇಳಬಹುದಾಗಿದೆ. ರೇಡಿಯೋ ಶಿವಮೊಗ್ಗ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಗಳ ಮುಖಾಂತರ ಡೌನ್ಲೋಡ್ ಮಾಡಿಕೊಂಡು, ದಿನದ 24 ಗಂಟೆಗಳ ಪ್ರಸಾರವನ್ನು ಆನಂದಿಸಬಹುದು ಎಂದು ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post