ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡಬೇಕಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಮಟ್ಟದಲ್ಲಿ ತಲೆದೋರಿರುವ ಹಿಜಾಬ್-ಕೇಸರಿ ವಿವಾದವು ಶಿವಮೊಗ್ಗ ನಗರಲ್ಲಿಯೂ ಕೆಲವು ಅಹಿತಕರ ಘಟನೆಗಳು ನಡೆದು, ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿರುವುದು ದುರದೃಕರ ಫೆ.8ರಂದು ನಗರದಲ್ಲ್ಲಿ ನಡೆದ ಅಹಿತಕರ ಘಟನೆಗಳ ಸಂಬಂಧ ತಾವು ಶಿಸ್ತು ಪಾಲನೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ 144ನೇ ಸೆಕ್ಷನ್ ಜಾರಿ ಮಾಡಿರುವುದು ಸರಿಯಷ್ಟೆ. ಆದರೆ ಹಲವು ನಗರ ಪ್ರದೇಶಗಳಲ್ಲಿ ಬಲತ್ಕಾರವಾಗಿ ಏಕಾಎಕಿ ಅರಕ್ಷಕ ಇಲಾಖೆಯವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿರುವುದು ವ್ಯಾಪಾರಸ್ಥರು ತೊಂದರೆಗ ಒಳಗಾಗಿರುತ್ತಾರೆ. ವ್ಯಾಪಾರಸ್ತರು ಇದೀಗ ಕೊರೋನಾ ಸಂಕಷ್ಟದಿಂದ ಮೇಲೆದ್ದು ತಮ್ಮ ಉದ್ಯೋಗದಲ್ಲಿ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಿಕೊಂಡು ಸುದಾರಿಸಿಕೊಳ್ಳ್ಳುತ್ತಿರುವಾಗ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿರುವುದು ತುಂಬಾ ದುರದೃಷ್ಟಕರ ಹಾಗೂ ತುಂಬಾ ತೊಂದರೆಗೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದಲ್ಲಿ ಉಂಟಾದ ಈ ಅಹಿತಕರ ಪ್ರಕ್ಷಬ್ಧ ಪರಿಸ್ಥಿತಿಯನ್ನು ತಾವು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಶಾಂತಿ ಸುವ್ಯವಸ್ಥ್ತೆಗೆ ಕಾರಣರಾಗಿದ್ದೀರಿ ಅದಕ್ಕಾಗಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳನ್ನು ಅಭನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಬಿ. ವಿಜಯಕುಮಾರ್, ನಿರ್ದೇಶಕರುಗಳಾದ ಎಸ್.ಎಸ್. ಉದಯಕುಮಾರ್, ಬಿ.ಆರ್ ಸಂತೋಷ್, ಪ್ರದೀಪ್ ವಿ. ಎಲಿ, ಗಣೇಶ ಎಂ. ಅಂಗಡಿ, ಗಾಂಧಿಬಜಾರ ವರ್ತಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ದಿನಕರ್, ತಾನಾಜಿ, ಕಬ್ಬಿಣ ಉಕ್ಕು ವ್ಯಾಪಾರಿಗಳ ಸಂಘ, ಫಾರ್ಮಸಿಸ್ಟ್ ಅಸೋಸಿಯೇಶನ್, ಪೈನಾನ್ಸ್ ಅಸೋಷಿಯೇಷನ್, ಜವಳಿ ವರ್ತಕರ ಸಂಘ, ನೆಹರೂ ರಸ್ತೆ ವರ್ತಕರ ಸಂಘ ಹಾಗೂ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post