ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ-ಭದ್ರಾವತಿ (ಸೂಡಾ) ಅಧ್ಯಕ್ಷರಾಗಿ SUDA ಪದಗ್ರಹಣ ಮಾಡಿದ ನಂತರ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಚ್.ಎಸ್. ಸುಂದರೇಶ್ ಅವರು ನಗರದ ಅಭಿವೃದ್ಧಿಯ ಕುರಿತಾಗಿ ತಮ್ಮ ಗುರಿಯನ್ನು ಬಿಚ್ಚಿಟ್ಟಿದ್ದಾರೆ.
ಸೂಡಾ ಕಚೇರಿಯಲ್ಲಿ ಸುಂದರೇಶ್ ಅವರು ಮಾತನಾಡಿದ್ದು, ತಮ್ಮನ್ನು ನೇಮಕ ಮಾಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹೀಗಿದೆ ಸುಂದರೇಶ್ ಉಲ್ಲೇಖಿಸಿದ ಅಂಶಗಳು:
- ಮಾರ್ಚ್ 7ರಂದು ಸೂಡಾ ಬಜೆಟ್ ಮಂಡನೆ
- ಭೂಮಿ ಗುರುತಿಸಿ ಬಡ, ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ
- ಸೂಡಾದಿಂದ ಒಟ್ಟು 10 ಸಾವಿರ ನಿವೇಶನ ಹಂಚಿಕೆಯ ಗುರಿ
- ಸೋಮಿನಕೊಪ್ಪದಲ್ಲಿ ಸೂಡಾದಿಂದ ಅಪಾರ್ಟ್’ಮೆಂಟ್ ನಿರ್ಮಾಣ
- ಊರುಗಡೂರಿನಲ್ಲಿ 684 ನಿವೇಶನ ಹಂಚಿಕೆ ಕ್ರಮ
- ವಾಣಿಜ್ಯ ನಿವೇಶನದಲ್ಲಿ ಮಾಲ್ ನಿರ್ಮಾಣ
- 35 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ದಿ
- ಆರಂಭದಲ್ಲಿ ಪುರಲೆ ಕೆರೆ ಅಭಿವೃದ್ಧಿ ಆರಂಭ
- ಸೂಡಾ ವ್ಯಾಪ್ತಿಯಲ್ಲಿನ ಕೆರೆ ಒತ್ತುವರಿ ತೆರವಿಗೆ ಕ್ರಮ
- ನಗರದಲ್ಲಿನ ಪಾರ್ಕ್’ಗಳ ಅಭಿವೃದ್ಧಿಗೆ ಕ್ರಮ
- ನಗರದ ಸರ್ಕಲ್’ಗಳ ಸೌಂದರ್ಯ ಹೆಚ್ಚಿಸಲು ಕ್ರಮ
- ವಾಜಪೇಯಿ ಲೇಔಟ್ ಸಮಸ್ಯೆ ಪರಿಹಾರಕ್ಕೆ ಕ್ರಮ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post