ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಫೆಬ್ರವರಿ 4ರಂದು ಸರ್ಕಾರಿ ನೌಕರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ಎನ್‌ಇಎಸ್ ಮೈದಾನದಲ್ಲಿ ಅಂದು ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಮಿಲಿ ಮಾರ್ಟ್‌ನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಖ್ಯಾತ ವಾಗ್ಮಿ ಡಾ. ಗುರುರಾಜ ಕರ್ಜಗಿ ಅವರು ಪ್ರಜಾಸ್ನೇಹಿ ಆಡಳಿತದ ಬಗ್ಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಬಳಿಕ ಕೆಲಸದ ಒತ್ತಡಕ್ಕೆ ನಗೆ ಮದ್ದು ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ನಡೆಸಿಕೊಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ 7 ರಿಂದ 8 ಸಾವಿರ ನೌಕರರು ಭಾಗವಹಿಸಲಿದ್ದಾರೆ. ಅವರುಗಳಿಗೆ ಒಒಡಿ ಸೌಲಭ್ಯವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ನೌಕರರಿಗೆಂದೇ ಮಿಲಿ ಮಾರ್ಟ್‌ನ್ನು ಸರ್ಕಾರಿ ನೌಕರರ ಭವನದ ಪಕ್ಕದಲ್ಲಿಯೇ ಸಿದ್ಧಪಡಿಸಲಾಗಿದೆ. ಇದರಲ್ಲಿ ಶೇ.10ರಿಂದ 60ರವರೆಗೆ ರಿಯಾಯ್ತಿ ಸಿಗಲಿದೆ. ಸುಮಾರು 4 ಕೋಟಿ ರೂ. ವೆಚ್ಚ ಮಾಡಿ ಇದನ್ನು ಸಿದ್ಧಪಡಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಇದನ್ನು ನಿರ್ವಹಿಸಲಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಮಾರ್ಟ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.
ದಿನಸಿ, ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಔಷಧ ಸೇರಿದಂತೆ ಎಲ್ಲಾ ಬಗೆಯ ವಸ್ತುಗಳೂ ಇದರಲ್ಲಿ ಸಿಗಲಿವೆ. ಸರ್ಕಾರಿ ನೌಕರರಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದರು

ಶಾಸಕ ಕುಮಾರ್ ಬಂಗಾರಪ್ಪ ಅವರ ಆರೋಪಗಳ ಕುರಿತು ಷಡಕ್ಷರಿ ಪ್ರತಿಕ್ರಿಯಿಸಿ, ಸಾಗರದಲ್ಲಿಯಾಗಲೀ ಅಥವಾ ಬೇರೆ ಕಡೆಯೇ ಆಗಲಿ ನಾನು ಯಾವ ಶಾಸಕರ ಹೆಸರನ್ನೂ ಹೇಳಿಲ್ಲ. ಡಿಸಿ ಕಚೇರಿ ಮುಂದೆ ಕಂದಾಯ ಇಲಾಖೆ ನೌಕರರು ಮಾಡಿರುವ ಪ್ರತಿಭಟನೆ ಹಿಂದೆ ಯಾವುದೇ ಕುಮ್ಮಕ್ಕೂ ಇಲ್ಲಘ. ಸಂಘದ ರಾಜ್ಯಾಧ್ಯಕ್ಷ ಆಗಿರುವುದರಿಂದ ನೌಕರರು ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡುವುದು ಸಹಜ ಪ್ರಕ್ರಿಯೆ ಎಂದರು.
ಅಭಿವೃದ್ಧಿಗೆ ಮಾರಕ:
ಪದೇ ಪದೇ ಅಕಾರಿಗಳನ್ನು ವರ್ಗಾವಣೆ ಮಾಡಿದರೆ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಜಿಲ್ಲಾಕಾರಿಗಳನ್ನು ಕೂಡ ಎರಡು ವರ್ಷ ವರ್ಗಾವಣೆ ಮಾಡುವುದಿಲ್ಲಘಿ. ಅವರಿಗೂ ಕುಟುಂಬ, ಮಕ್ಕಳು ಇರುತ್ತಾರೆ. ಇದನ್ನು ಹೇಳಿzನೆಯೇ ಹೊರತು, ಯಾವುದೇ ರಾಜಕೀಯ ಇಲ್ಲಘಿ. ಇದನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದರು.

ಕುಮಾರ್ ಬಂಗಾರಪ್ಪ ಅವರು ಮಾಜಿ ಸಚಿವರು, ಮಾಜಿ ಸಿಎಂ ಪುತ್ರ ಕೂಡ. ಅವರ ಬಗ್ಗೆ ಅಪಾರ ಗೌರವ ಇದೆ. ಅವರ ಬಗ್ಗೆ ಎಲ್ಲಿಯೂ ನಾನು ಮಾತನಾಡಿಲ್ಲ. ಹಾಗಾಗಿ ಹಕ್ಕುಚ್ಯುತಿ ಮಂಡನೆ ಮಾಡಿದರೆ ಸ್ವಾಗತಿಸುತ್ತೇನೆ. ಇನ್ನು ಅರುಣ್‌ಕುಮಾರ್ ಹೈಕೋರ್ಟ್ ಆದೇಶದ ಮೇರೆಗೆ ಶಿರಸ್ತೇದಾರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನೌಕರ ಸಂಘದ ಆರ್.ಮೋಹನ್‌ಕುಮಾರ್, ಕೃಷ್ಣಮೂರ್ತಿ, ಪಾಪಣ್ಣಘಿ, ಮಾರುತಿ, ಅರಣ್‌ಕುಮಾರ್ ಸುದ್ದಿಗೋಷ್ಟಿಯಲ್ಲಿದ್ದರು.









Discussion about this post