ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಧರ್ಮವನ್ನು ಹಾಗೂ ಹಿಂದೂಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನ್ಮದಲ್ಲಿ ಹಿಂದೂ ಧರ್ಮವನ್ನು ಹತ್ತಿಕ್ಕಕಲು ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ನಾವು ಅವಕಾಶ ಕೊಡುವುದೂ ಇಲ್ಲ. ಸುಮ್ಮನೆ ಕುಚೋದ್ಯ ಮಾಡುವುದು ಸರಿಯಲ್ಲ ಎಂದರು.
ಕರಸೇವಕ ಶ್ರೀಕಾಂತ್ ಪೂಜಾರಿ ಮೇಲಿನ ಪ್ರಕರಣವನ್ನು ಅಂದು ಹಿಂತೆಗೆದಿದ್ದು ಯಾರು? ಆಗ ನಮ್ಮ ಸರ್ಕಾರ ಇತ್ತೇ? ಅಧಿಕಾರದಲ್ಲಿದ್ದ ಅವರೇ ಹಿಂತೆಗೆದು ಈಗ ಕರಸೇವಕ ಎಂಬುದಕ್ಕಾಗಿ ಕ್ರಮ ಕೈಗೊಳ್ಳುತ್ತಿದ್ದಾರಾ? ಎಂದು ಪ್ರಶ್ನಸಿದರು.
Also read: ಹರಿಪ್ರಸಾದ್’ರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ: ಈಶ್ವರಪ್ಪ ಆಗ್ರಹ
ಕಾಂಗ್ರೆಸ್ ಪಕ್ಷ ಹಿಂದೂ ಧರ್ಮ ವಿರೋಧಿಯಾಗಿದ್ದು, ಧರ್ಮವನ್ನು ಒಡೆಯುವ ಕಾರ್ಯವನ್ನು ಮಾಡುತ್ತಿದೆ. ಆ ಪಕ್ಷದ ನೀತಿಯೇ ಹಿಂದೂ ಧರ್ಮ ವಿರೋಧಿ ನೀತಿ ಎಂದು ಕಿಡಿ ಕಾರಿದರು.
ಮುಸ್ಲೀಂರಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಎಷ್ಟು ನೀಡಿದ್ದಾರೆ. ಬರದಿಂದಾಗಿ ರೈತರು ಕಂಗೆಟ್ಟು ಸಂಕಷ್ಟದಲ್ಲಿದ್ದರೆ ಅವರಿಗೆ ಕೇವಲ 2 ಸಾವಿರ ರೂಪಾಪಿ, ಆದರೆ, ಮುಸ್ಲೀಮರಿಗೆ 10 ಸಾವಿರ ಕೋಟಿ ರೂ. ಅನುದಾನವೇ? ಇದು ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವ ರೀತಿಯೇ ಎಂದು ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ತುಘಲಕ್ ನೀತಿ ಅನುಸರಿಸುತ್ತಿದ್ದು, ಏನು ಮಾಡಿದರೂ ನಡೆಯುತ್ತದೆ ಎಂಬಂತೆ ನಡೆದುಕೊಳ್ಳುತ್ತಿದೆ. ನಾವೂ ಬದುಕಿರುತ್ತೇವೆ, ನೋಡುತ್ತೇವೆ. ಹಿಂದೂ ಧರ್ಮದ ಮೇಲಿನ ತುಳಿತವನ್ನು ಸಹಿಸುವುದಿಲ್ಲ. ಅದು ನಡೆಯಲು ನಾವು ಅವಕಾಶ ನೀಡುವುದೂ ಇಲ್ಲ ಎಂದು ತಿರುಗೇಟು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















