ಕಲ್ಪ ಮೀಡಿಯಾ ಹೌಸ್ | ಕೊಡಚಾದ್ರಿ/ಶಿವಮೊಗ್ಗ |
ಆದಿಗುರು ಶಂಕರಾಚಾರ್ಯರು #Shankaracharya ತಪಸ್ಸು ಮಾಡಿದ ಕೊಡಚಾದ್ರಿಯ #Kodachadri ಸರ್ವಜ್ಞ ಪೀಠ ಹಾಗೂ ಜಗನ್ಮಾತೆ ಮೂಕಾಂಬಿಕೆಯ ಕೊಲ್ಲೂರು #Kolluru ನಡುವಿನ ಸುಲಭ ಸಂಪರ್ಕಕ್ಕಾಗಿ ಸಲ್ಲಿಸಲಾಗಿದ್ದ ರೋಪ್ ವೇ #Ropeway ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
Also Read: ಮೈಸೂರು-ತಾಳಗುಪ್ಪ ರೈಲು ಇನ್ನುಮುಂದೆ ಕುವೆಂಪು ಎಕ್ಸ್’ಪ್ರೆಸ್
ರೋಪ್ ವೇ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರ ಸತತ ಪ್ರಯತ್ನದ ಫಲ ಇದಾಗಿದೆ.

ಎಲ್ಲಿಂದ ಎಲ್ಲಿಗೆ ಸಂಪರ್ಕ?
ಶಂಕರಾಚಾರ್ಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞ ಪೀಠ ಹಾಗೂ ಮೂಕಾಂಬಿಕೆಯ ಆರಾಧನ ಸ್ಥಳ ಕೊಲ್ಲೂರು ನಡುವೆ ಈ ರೋಪ್ ವೇ ನಿರ್ಮಾಣವಾಗಲಿದೆ. ಸಂಸದ ರಾಘವೇಂದ್ರ ಅವರ ಕನಸಿನ ಮಹತ್ವದ ಯೋಜನೆ ಇದಾಗಿದ್ದು, ಮಲೆನಾಡಿನ #Malnad ಮೊಟ್ಟ ಮೊದಲ ರೋಪ್ ವೇ #Ropeway ಎಂಬ ಖ್ಯಾತಿಗೂ ಸಹ ಪಾತ್ರವಾಗಲಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇಲ್ಲಿಂದ 40 ಕಿಮೀ ದೂರದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಸರ್ವಜ್ಞ ಪೀಠವಿದೆ. ಕೊಲ್ಲೂರಿಗೆ ಭೇಟಿ ನೀಡುವ ಭಕ್ತರು ಬಹುತೇಕರು ಇಲ್ಲಿಗೆ ತೆರಳುತ್ತಾರೆ. ಈ ಪ್ರದೇಶದಲ್ಲಿ ತೆರಳಲು ಜೀಪ್ ಬಳಸಬೇಕಿದ್ದು, ಇದಕ್ಕೆ ಒಂದೂವರೆ ಗಂಟೆಗೂ ಅಧಿಕ ಸಮಯ ಹಿಡಿಯತ್ತದೆ. ಈ ರೋಪ್ ವೇ ನಿರ್ಮಾಣವಾದರೆ ದೂರ 7 ಕಿಮೀಗೆ ಇಳಿಯಲಿದ್ದು, ಕೇವಲ 15 ನಿಮಿಷದಲ್ಲಿ ತಲುಪಬಹುದಾಗಿದೆ.
Also Read: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಡಿಎ ಘೋಷಣೆ: ಸಿಎಂ ಬೊಮ್ಮಾಯಿ ಟ್ವೀಟ್
ಪ್ರವಾಸೋದ್ಯಮಕ್ಕೆ ಪೂರಕ
ಇನ್ನು, ಈ ರೋಪ್ ವೇ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ #Tourism ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದೆ. ಅಲ್ಲದೇ, ಭಕ್ತರು ಹಾಗೂ ಪ್ರವಾಸಿಗರಿಗೆ ಸಹಕಾರಿಯಾಗಲಿದ್ದು, ಸ್ಥಳೀಯ ಮಟ್ಟದಲ್ಲಿ ಉದ್ಯೋಗವೂ ಸಹ ಸೃಷ್ಠಿಯಾಗಲಿದೆ.









Discussion about this post