ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ಸಿನ ತುಷ್ಠೀಕರಣ ರಾಜಕಾರಣಕ್ಕೆ ಇನ್ನೆಷ್ಟು ಹಿಂದುಗಳ ಬಲಿ ಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ, #B Y Raghavendra ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂಗಳ ಬಳಿ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿ ಪೋಷಣೆ ಮಾಡುತ್ತ ಬಂದಿದೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಇತ್ತೀಚಿನ ಉದಾಹರಣೆಯೆಂದರೆ ಯುವತಿ ನೇಹಳ ಕೊಲೆ, ಈ ಕೊಲೆಯನ್ನು ವಿರೋಧಿಸಿ ನಾಳೆ ಬೆಳಿಗ್ಗೆ 10.30ಕ್ಕೆ ಗೋಪಿವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕೊಲೆಯಾಗಿದ್ದು ಹಿಂದು ಯುವತಿ ನೇಹಾ, ರಕ್ಷಣೆ ನೀಡ ಬೇಕಾಗಿದ್ದು ನೇಹಾ ಕುಟುಂಬಕ್ಕೆ, ಆದರೆ ಇವರು ರಕ್ಷಣೆ ನೀಡಿದ್ದು ಮಾತ್ರ ಫಯಾಜ್ ಕುಟುಂಬಕ್ಕೆ ಇದೆಂತಹ ತುಷ್ಠೀಕರಣ. ಈ ಹಿಂದೆಯೂ ಕೂಡ ಅನೇಕ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಈ ಹಲ್ಲೆಗೆ ಕಾಂಗ್ರೆಸ್ಸ್ ಸರ್ಕಾರ ಕಾರಣವಾಗುತ್ತದೆ. ಈ ಸರ್ಕಾರದಲ್ಲಿ ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂದು ಒಂದು ಕೋಮಿನ ವರ್ಗ ನಿಶ್ಚಯಿಸಿದಂತಿದೆ ಎಂದರು.

Also read: ತಂದೆಯ ಹಾದಿಯಲ್ಲಿ ಸಾಗಿ, ಜನಸಾಮಾನ್ಯರಿಗೆ ಪೂರಕ ಆಡಳಿತ ನೀಡಲು ಬದ್ಧ: ಗೀತಾ ಶಿವರಾಜ್‌ಕುಮಾರ್
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂಗಳಿಗೆ ಉಳಿಗಾಲವೇ ಇಲ್ಲವಾಗಿದೆ. ಅದರ ಆಡಳಿತವೇ ಆಗಿದೆ. ಹಿಂದೂಗಳನ್ನು ಹತ್ಯೆ ಮಾಡಲೇ ಬೇಕು ಎಂಬಂತೆ ಘಟನೆಗಳು ನಡೆಯುತ್ತಿದೆ. ಜಾತ್ಯಾತೀತ ಎಂಬ ಪದಕ್ಕೆ ಅರ್ಥವೇ ಇಲ್ಲವಾಗಿದೆ. ಲವ್‍ಜಿಹಾದ್ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೆ ಈ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬುತ್ತಿದೆ ಎಂದರು.

ಭಯೋತ್ಪಾದಕರನ್ನು ಸಾಕುವ ತಾಣವಾಗಿದೆ. ಕರ್ನಾಟಕ. ಕೋಮುಭಾವನೆಗಳನ್ನು ಕೆರಳಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಒಂದು ಪಕ್ಷ ಹೀಗೆ ಮುಂದುವರೆದರೆ ಹಿಂದೂಗಳು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ಕಾರಣವಾಗುತ್ತದೆ. ಈ ಸರ್ಕಾರ ಷಂಡಾ ಸರ್ಕಾರ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಿ.ಎಸ್.ಅರುಣ್, ಎಂ.ಬಿ.ಭಾನುಪ್ರಕಾಶ್, ಎಸ್.ದತ್ತಾತ್ರಿ, ಜ್ಞಾನೇಶ್ವರ್, ಮಾಲತೇಶ್, ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್, ಹರಿಕೃಷ್ಣ, ರಾಜು ತಲ್ಲೂರು, ಶಿವಾಜಿ, ಶರತ್ ಕಲ್ಯಾಣಿ, ಕೆ.ವಿ. ಅಣ್ಣಪ್ಪ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳಿಂದ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post