ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಮ್ಮ ಬೇಡಿಕೆಗಳನ್ನು ಮುಂದಿಟ್ಟು 4 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ಕಣ್ತೆರೆದಿಲ್ಲ. ವೇತನ ಹೆಚ್ಚಳ ಮತ್ತು ಸೇವಾ ಭದ್ರತೆ ಪ್ರಮುಖ ಬೇಡಿಕೆಯಾಗಿದೆ. ಆದರೆ ಸರಕಾರ ತಮ್ಮ ಬೇಡಿಕೆಯನ್ನು ಹಗುರವಾಗಿ ಪರಿಗಣಿಸಿದೆ. ಕೂಡಲೇ ಲಿಖಿತ ರೂಪದಲ್ಲಿ ಇದರ ಬಗ್ಗೆ ಭರವಸೆ ಕೊಡದಿದ್ದರೆ ಮಾ. 6ರಿಂದ ರಾಜ್ಯದಾದ್ಯಂತ ಎರಡನೆಯ ಹಂತದ ಹೋರಾಟ ಆರಂಭಿಸುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರರ ಸಂಘ ಎಚ್ಚರಿಸಿದೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಮತ್ತು ರಾಜ್ಯಾಧ್ಯಕ್ಷ ವಿಶ್ವಾರಾಧ್ಯ, ಶೇ. 15ರಷ್ಟು ವೇತನ ಹೆಚ್ಚಳವನ್ನು ಗುತ್ತಿಗೆ – ಹೊರಗುತ್ತಿಗೆ ನೌಕರರಿಗೆ ಮೊದಲು ನೀಡಬೇಕು. ಹಂತ ಹಂತವಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಲಿಖಿತ ಭರವಸೆ ನೀಡಬೇಕು. ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ವಿಮೆ ನೀಡಬೇಕು. ವಿಶೇಷ ಸೇವಾ ಭತ್ಯೆ ಜಾರಿ ಮಾಡಬೇಕು ಎಲ್ಲಾ ನೌಕರರಿಗೆ ದಿನಭತ್ಯೆ , ಪ್ರಯಾಣ ಭತ್ಯೆ ಈಡಬೇಕು. ಸಾಮಾಜಿಕ ಭದ್ರತೆ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಅಸ್ಸಾಂ ಮಾದರಿಯಲ್ಲಿ 60 ವಯಸ್ಸಿನವರೆಗೆ ಸೇವಾ ಭದ್ರತೆ ನೀಡುವುದು. ಹೊರಗುತ್ತಿಗೆ ನೌಕರರನ್ನು (ನೇರ ಒಳ) ಗುತ್ತಿಗೆ ಪದ್ಧತಿ ಅಡಿಯಲ್ಲಿ ತರುವುದು ಅಥವಾ ನೇರವೇತನ ಪಾವತಿಗೆ ಪ್ರತ್ಯೇಕ ಸಂಸ್ಥೆ (ಬೀದರ್ ಅಥವಾ ಹರಿಯಾಣ ಮಾದರಿ) ರಚಿಸಿ ಕ್ರಮವಹಿಸುವುದು. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, 14 ದಿನ ಮುಷ್ಕರ ಅವಧಿಯ ವೇತನ ನೀಡುವುದು. ಕೃಪಾಂಕ 20 ರಿಂದ 30ಕ್ಕೆ ಹೆಚ್ಚಳ, ಈಗ ನೇಮಕಾತಿ ಪ್ರಕ್ರಿಯೆಗೆ ಅನ್ವಯಿಸುವಂತೆ ಮಾಡಬೇಕೆಂದು ಆಗ್ರಹಿಸಿದರು.
ಸಾಂದರ್ಭಿಕ/ಶಿಶುಪಾಲನಾ/ಮಹಿಳಾ ಶಸ್ತ್ರಚಿಕಿತ್ಸೆ ರಜೆ ಹಾಗೂ ಗಳಿಕೆ ರಜೆ ಹೆಚ್ಚಳ ನೀಡುವುದು. ಗುತ್ತಿಗೆ – ಹೊರಗುತ್ತಿಗೆ ನೌಕರರ ಕುಟುಂಬಕ್ಕೆ ಅನುಕಂಪದ ಆಧಾರಿತ ನೌಕರಿ ನೀಡುವುದು. ಛತ್ತಿಸಗಡ್/ಹರಿಯಾಣ ಮಾದರಿಯ್ಲಿ ಬಾಂಡ್ ಮತ್ತು ಒಂದು ದಿನದ ವಿರಾಮ ಪದ್ಧತಿ ರದ್ದುಗೊಳಿಸುವುದು, ಸಕಾರಣವಿಲ್ಲದೇ ವಜಾಗೊಂಡ ನೌಕರರನ್ನು ಮರುನೇಮಕ ಮಾಡಿಕೊಳ್ಳಬೇಕು. ಸಕಾರಣವಿಲ್ಲದೆ ವೇತನ ಕಡಿಮೆ ಮಾಡಿರುವುದನ್ನು ಸರಿಪಡಿಸಬೇಕೆನ್ನುವುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post