ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಗೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ವಿಧದಿಂದ ಕೊರೋನಾ ಸಂಕಷ್ಟದಲ್ಲಿ ತಮ್ಮ ತಮ್ಮ ಅಳಿಲು ಸೇವೆ ಮಾಡುತ್ತಿದ್ದಾರೆ ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ವಿಭಾಗೀಯ ಕಛೇರಿಯ ಗ್ರಾಹಕರು ಹಾಗೂ ಸಮಾಜ ಸೇವಾಕರ್ತ ಜಿ.ವಿಜಯಕುಮಾರ್ ತಿಳಿಸಿದರು.
ಅವರು ಇಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಶಿವಮೊಗ್ಗ ವಿಭಾಗೀಯ ಕಛೇರಿಯ ಸಿಬ್ಭಂದಿಗಳು ನೀಡಿದ 600 ಕಸದ ಬುಟ್ಟಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಿ ಮಾತನಾಡಿದರು.
ಇಡೀ ಜಗತ್ತು ಯಾರೂ ಊಹಿಸಲಾಗದ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಸರ್ಕಾರವೇ ಎಲ್ಲ ಸೌಲಭ್ಯ ಒದಗಿಸುತ್ತದೆ ಎಂಬ ಭಾವನೆ ಹೊಂದದೆ ತಮ್ಮ ಕೈಲಾದ ಸಹಾಯ ಮಾಡಬೇಕಾಗಿದ್ದು ನಮ್ಮ ಕರ್ತವ್ಯ ಎಂದರು.
ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀಧರ್ ರವರು ಮಾತನಾಡಿ, ಉತ್ತಮ ಚಿಕಿತ್ಸೆ ನೀಡುತ್ತಿರುವ ಮೆಗ್ಗಾನ್ ಅಸ್ಪತ್ರೆಗೆ ಹೊರ ಜಿಲ್ಲೆಗಳಿಂದಲೂ ಹೆಚ್ಚು ಹೆಚ್ಚು ರೋಗಿಗಳು ಬರುತ್ತಿದ್ದು ಸರ್ಕಾರದ ಸೌಲಭ್ಯಗಳ ಜೊತೆಗೆ ಸಾರ್ವಜನಿಕರು ಕೂಡ ಸಹಾಯ ನೀಡುತ್ತಿದ್ದಾರೆ. ಪ್ರತಿ ರೋಗಿಯ ಮಂಚದ ಬಳಿ ಕಸದ ಬುಟ್ಟಿಯ ಅವಶ್ಯಕತೆ ಅರಿತ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ವಿಭಾಗೀಯ ಕಛೇರಿಯ ಸಿಬ್ಬಂದಿಗಳು ನೀಡಿದ ಕೊಡುಗೆ ಅಮೂಲ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಿಭಾಗದ ಮುಖ್ಯ ವೈದ್ಯರಾದ ಡಾ.ಮಹೇಂದ್ರ, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ, ಮಂಜುನಾಥ ಕದಮ್, ರೋಟೇರಿಯನ್ ಟಿ.ವಿ.ಭಾರತ್ ನ ಮುಖ್ಯಸ್ಥ ಹಾಲಸ್ವಾಮಿ ಉಪಸ್ಥಿತರಿದ್ದರು.
ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಮುಖ್ಯಸ್ಥರಾದ ಖಾತೂನ್ ಬೀ ಸಾಬ್, ಮತ್ತು ಲೀಲಾ ದುಶ್ಯಂತ್, ಶಾಹಿನ ಕೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post