ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕಂಟೈನ್ಮೆಂಟ್ ಝೋನ್’ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರು ಪೊಲೀಸರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, ದೊಡ್ಡಪೇಟೆ ಠಾಣೆಯ ಎಎಸ್‌ಐ(48) ಹಾಗೂ ಹೆಡ್ ಕಾನ್ಸ್’ಸ್ಟೇಬಲ್(45) ಇಬ್ಬರಿಗೆ ಇಂದು ಕೊರೊನಾ ಸೊಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ಇಬ್ಬರೂ ಆರಕ್ಷಕರು ನಗರದ ಕೆಲವು ಕಂಟೈನ್ಮೆಂಟ್ ಝೋನ್’ಗಳಲ್ಲಿ ಬಹಳಷ್ಟು ದಿನ ಕರ್ತವ್ಯ ನಿರ್ವಹಿಸಿದ್ದು, ಇದೇ ಸೋಂಕು ತಗುಲಲು ಕಾರಣ ಎಂದು ಹೇಳಲಾಗಿದ್ದರೂ, ನಿಖರವಾಗಿ ತಿಳಿದುಬಂದಿಲ್ಲ.
ನಿತ್ಯ ನಿರಂತರ ನಮ್ಮ ರಕ್ಷಣೆಗೆ ಶ್ರಮಿಸುವ ಪೊಲೀಸರೂ ಕೊರೋನಾ ಸೊಂಕಿನೊಳಗೆ ಸಿಲುಕಿಕೊಳ್ಳುತ್ತಿರುವುದು ದುರಂತದ ಸಂಗತಿ. ಬೆಂಗಳೂರಿನಲ್ಲಿ 400 ಕ್ಕೂ ಅಧಿಕ ಪೊಲೀಸರಿಗೆ ಕೊರೋನಾ ಸೋಂಕಿರುವುದು ತಿಳಿದಿರುವ ವಿಚಾರ. ಹೀಗಾಗಿ ಆರಕ್ಷಕರ ರಕ್ಷಣೆಗಾಗಿ ಇಲಾಖೆ ಹಾಗೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
Get In Touch With Us info@kalpa.news Whatsapp: 9481252093
















