ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಬಿಜೆಪಿ 2ನೆಯ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಶಿವಮೊಗ್ಗ ಪಾಲಿಕೆ ಬಿಜೆಪಿ ಸದಸ್ಯರ ದೊಡ್ಡ ತಂಡ ಬೆಂಗಳೂರಿಗೆ ತೆರಳಿ, ರಾತ್ರೋರಾತ್ರಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದೆ.
ಪಾಲಿಕೆ ಬಿಜೆಪಿ ಸದಸ್ಯರ ತಂಡ ಬೆಂಗಳೂರಿಗೆ ತೆರಳಿ ನಿನ್ನೆ ರಾತ್ರಿ ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಟಿಕೇಟ್ ನೀಡಬೇಕು ಎಂದು ಮನವಿ ಸಲ್ಲಿಸಿದೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೂ ಸಹ ಅವರಿಗೆ ಟಿಕೇಟ್ ನೀಡಬೇಕು. ಅನಿವಾರ್ಯವಾಗಿ ಸಾಧ್ಯವಾಗದಿದ್ದರೆ ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದರು.

ಮೇಯರ್ ಶಿವಕುಮಾರ್ ಸೇರಿದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಉಪ ಮೇಯರ್ ಲಕ್ಷ್ಮೀ ಶಂಕರ ನಾಯ್ಕ್, ಸದಸ್ಯರಾದ ಸುರೇಖಾ ಮುರಳೀಧರ್, ವಿಶ್ವಾಸ್, ಗನ್ನಿ ಶಂಕರ್, ಪ್ರಭಾಕರ್, ಆರತಿ, ಅನಿತಾ, ಯು.ಎಚ್. ವಿಶ್ವನಾಥ್, ಎಸ್.ಜಿ. ರಾಜು, ಪ್ರಭಾಕರ್, ಮಂಜುನಾಥ್, ಸಂಗೀತಾ ನಾಗರಾಜ್, ಆಶಾ ಚಂದ್ರಪ್ಪ, ರಾಹುಲ್ ಬಿದರೆ, ಭಾನುಮತಿ ಶೇಟ್, ಲತಾ ಗಣೇಶ್, ಶಿರೀಶ್, ಮೂರ್ತಿ ಸೇರಿದಂತೆ ಎಲ್ಲಾ ಬಿಜೆಪಿ ಸದಸ್ಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post