ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ರೈನ್ ಬೋ ಸ್ಕಿನ್ ಹೇರ್ ಕ್ಲಿನಿಕ್’ನಲ್ಲಿ #RainbowSkinHairClinic ಮಹಿಳೆಯರಿಗಾಗಿ ಕಾಸ್ಮೆಟಿಕ್ ಗೈನಾಕಾಲಜಿ ವಿಭಾಗವನ್ನು ಉದ್ಘಾಟಿಸಲಾಗಿದ್ದು, ನಗರದ ಮಹಿಳೆರಿಗೆ ವಿಶಿಷ್ಠ ಸೇವೆ ನೀಡಲು ಮುಂದಾಗಿದೆ.
ಹೌದು… ಮಹಿಳೆಯರ ಆರೋಗ್ಯ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೊಸ ಘಟಕವನ್ನು ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಎಸ್’ಒಜಿಎ ಮುಖ್ಯ ಪೋಷಕರು, ಎಸ್’ಒಜಿಎಸ್ ಸಂಸ್ಥಾಪಕ ಸದಸ್ಯರು ಹಾಗೂ ಹಿರಿಯ #Gynecology ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರೂ ಆದ ಡಾ.ಎಚ್. ನಾಗರಾಜ್, ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಜೊತೆಗೆ ಜೀವನದ ಗುಣಮಟ್ಟ ಮತ್ತು ಆತ್ಮವಿಶ್ವಾಸಕ್ಕೂ ಹೆಚ್ಚಿನ ಮಹತ್ವ ನೀಡುತ್ತಿರುವುದನ್ನು ಗಮನಿಸಿ, ಕಾಸ್ಮೆಟಿಕ್ ಗೈನಕಾಲಜಿಯ ಅಗತ್ಯತೆ ಹೆಚ್ಚುತ್ತಿದೆ ಎಂದು ಹೇಳಿದರು.
ಸುಬ್ಬರಾಮಯ್ಯನವರ ಅಂದಿನ ಕಲ್ಪನೆ ಸಾಮಾನ್ಯ ರೋಗದಿಂದ ಮೊದಲ್ಗೊಂಡು ಇಂದು ಅತ್ಯಾಧುನಿಕ ಕಾಸ್ಮೆಟಿಕ್ ಕ್ಲಿನಿಕ್‌ವರೆಗೂ #CosmeticClinic ಸಾಕಾರಗೊಂಡಿದೆ. ಇದರೊಂದಿಗೆ ನಗರದಲ್ಲಿ ಹಲವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೂಲಕ ಉದ್ಯೋಗ ಸೃಷ್ಠಿ ಜೊತೆಯಲ್ಲಿ ನಗರದ ಜನರಿಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ನೀಡುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು.
Also Read: ಜೆ.ಎನ್.ಎನ್.ಸಿ.ಇ: ‘ಉತ್ಥಾನ -2026’ ದಶಮಾನೋತ್ಸವ ಸಂಭ್ರಮ ಉದ್ಘಾಟನೆ
ಏನು ಚಿಕಿತ್ಸೆ ದೊರೆಯಲಿದೆ?
ಪ್ರಸವದ ನಂತರದ ದೈಹಿಕ ಬದಲಾವಣೆಗಳು, ವಯೋಸಹಜ ಸಮಸ್ಯೆಗಳು ಮತ್ತು ವೈಯಕ್ತಿಕ ಅಸೌಕರ್ಯಗಳು ಮಹಿಳೆಯರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭಗಳಲ್ಲಿ ಕಾಸ್ಮೆಟಿಕ್ ಗೈನಕಾಲಜಿ ವಿಭಾಗವು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ದೈಹಿಕ ಮತ್ತು ಮಾನಸಿಕ ಆರಾಮವನ್ನು ಸುಧಾರಿಸಿ, ಉತ್ತಮ ಜೀವನ ಗುಣಮಟ್ಟವನ್ನು ಒದಗಿಸಲು ಸಹಕಾರಿಯಾಗುತ್ತದೆ.
ಈ ಘಟಕದಲ್ಲಿ ವಜೈನಲ್ ರೀಜುವನೇಷನ್ #VaginalRejuvenation ಲೇಸರ್ ಚಿಕಿತ್ಸೆ, ಪ್ರಸವೋತ್ತರ ಆರೈಕೆ, ಮೂತ್ರ ನಿಯಂತ್ರಣ ಸಮಸ್ಯೆಗಳ ಚಿಕಿತ್ಸೆಗಳು, ಪಿಗ್ಮೆಂಟೇಶನ್ ಹಾಗೂ ಇತರ ಎಸ್ಥೆಟಿಕ್ ಸಮಸ್ಯೆಗಳ ಪರಿಹಾರ ಸೇರಿದಂತೆ ಹಲವಾರು ಅತ್ಯಾಧುನಿಕ ಸೇವೆಗಳು ಲಭ್ಯವಿವೆ. ಎಲ್ಲಾ ಸೇವೆಗಳು ಗೌಪ್ಯತೆ ಮತ್ತು ಸುರಕ್ಷತೆಯನ್ನು ಪ್ರಮುಖವಾಗಿ ಪರಿಗಣಿಸಿ ತಜ್ಞ ವೈದ್ಯರಿಂದ ನೀಡಲಾಗುತ್ತದೆ.
ರೈನ್ ಬೋ ಸ್ಕಿನ್-ಹೇರ್ ಕ್ಲಿನಿಕ್ ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ನೂತನ ಹಾಗೂ ಗುಣಮಟ್ಟದ ಸೇವೆಗಳನ್ನು ನೀಡುವ ಬದ್ಧತೆಯನ್ನು ಮುಂದುವರೆಸುತ್ತಿದ್ದು, ಈ ಹೊಸ ಘಟಕ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಹಿಳೆಯರಿಗೆ ಮಹತ್ತರ ಸೇವೆಯನ್ನು ಒದಗಿಸಲಿದೆ.
Also Read: ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್’ನಲ್ಲಿ ಕ್ರಿಯೇಟಿವ್ ಚಿಲಿಪಿಲಿ-2026 ಬೇಸಿಗೆ ಶಿಬಿರಕ್ಕೆ ಚಾಲನೆ
ಡಾ. ಎಸ್. ನಾಗೇಂದ್ರ, ಡಾ. ಲತಾ ತೆಲಂಗ್, ಡಾ. ವಿನಯ ಶ್ರೀನಿವಾಸ್, ಡಾ. ಎಸ್. ಶ್ರೀನಿವಾಸ್, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ವಿನಾಯಕ ಜಿ, ಪ್ರಾಂಶುಪಾಲ ಡಾ. ಸಿ.ಎಂ. ಸಿದ್ದಲಿಂಗಪ್ಪ ಹಾಗೂ ಎಂಎಸ್ ಡಾ. ಎನ್. ಕೌಶಿಕ್, ಕಾಸ್ಮೆಟಿಕ್ ಗೈನಾಕಾಲಜಿಸ್ಟ್ ಡಾ.ಭವ್ಯ, ಫೇಷಿಯಲ್ ಕಾಸ್ಮೆಟಿಕ್ ಮ್ಯಾಕ್ಸೋಪೇಶಿಯಲ್ ತಜ್ಞ ಡಾ.ಅನುಭವ್ ಜನ್ನು, ಚರ್ಮರೋಗ ತಜ್ಞರಾದ ಡಾ.ತೃಪ್ತಿ, ಡಾ. ಭರತ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















