ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಕಾಸ್ಮೋ ಕ್ಲಬ್ COSMO CLUB ಹಾಗೂ ನಳಂದ ಚೆಸ್ ಅಕಾಡೆಮಿಯ Nalanda Chess Academy ಸಂಯುಕ್ತಾಶ್ರಯದಲ್ಲಿ ಡ.3ರಂದು `ಮುಕ್ತ ರ‍್ಯಾಪಿಡ್ ಚೆಸ್ ಪಂದ್ಯಾವಳಿ’ಯನ್ನು Open Rapid Chess Tournament ಆಯೋಜಿಸಲಾಗಿದೆ.
ಅಂದು ಭಾನುವಾರ ಸಾಗರ ರಸ್ತೆಯಲ್ಲಿರುವ ಕಾಸ್ಮೋ ಕ್ಲಬ್’ನ ಶುಭಾಂಗಣ ಸಭಾಂಗಣದಲ್ಲಿ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೂ ಪಂದ್ಯಾವಳಿ ನಡೆಯಲಿದೆ.
ಈ ಪಂದ್ಯಾವಳಿಯಲ್ಲಿ 12 ವರ್ಷ, 16 ವರ್ಷ ಮತ್ತು ಮುಕ್ತ ವಯೋ ವರ್ಗಗಳಲ್ಲಿ ಅಂತಾರಾಷ್ಟ್ರೀಯ ನಿಯಮಗಳಿಗನುಸಾರವಾಗಿ ಚೆಸ್ ಪಂದ್ಯಾವಳಿ ನಡೆಯಲಿದೆ. ಅಲ್ಲದೇ, 8, 10, 12, 14 ಮತ್ತು 16 ವರ್ಷದ ಬಾಲಕ ಬಾಲಕಿಯರಿಗೆ ಹಾಗೂ 55 ವರ್ಷದ ಮೇಲಿನ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಕೂಡಾ ವಿಶೇಷ ಬಹುಮಾನ ನೀಡಲಾಗುವುದು. ಈ ಪಂದ್ಯಾವಳಿಯಲ್ಲಿ ಒಟ್ಟು 30,000,00 ರೂ.ಗಳ ಹೆಚ್ಚು ನಗದು ಬಹುಮಾನವಿದ್ದು, 50 ಮುಖ್ಯ ಟ್ರೋಫಿಗಳನ್ನು ನೀಡಲಾಗುತ್ತಿದೆ.
Also read: ಗಾಂಜಾ ಮಾರುತ್ತಿದ್ದ ಆರೋಪಿ ಅಂದರ್ | ಈತನ ಟಾರ್ಗೆಟ್ ಯಾರು ಗೊತ್ತಾ?
ಡಿಸೆಂಬರ್ 3 World Disability Day ದಿನ ಆಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಚೈನಾದ ಹ್ಯಾಂಗ್’ಸೂನಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ನಡೆದ ಏಷ್ಯನ್ ಪ್ಯಾರಾ ಒಲಿಂಪಿಕ್ ಪಂದ್ಯಾವಳಿಯಲ್ಲಿ ಕಂಚಿನ ಪದಕಗಳನ್ನು ಪಡೆದ ಕಿಶನ್ ಗಂಗೊಳ್ಳಿ ಮತ್ತು ವೃತ್ತಿ ಜೈನ್ ಇವರಿಗೆ ಸನ್ಮಾನ ಸಹ ನಡೆಯಲಿದೆ.
ಪಂದ್ಯಾವಳಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನಂಳದ ಚೆಸ್ ಅಕಾಡೆಮಿಯ ಅಧ್ಯಕ್ಷ ಕೃಷ್ಣ ಉಡುಪ (9844436276) ಅಥವಾ ವಿನೋಬನಗರ ನಳಂದ ಚೆಸ್ ಅಕಾಡೆಮಿಯ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post