ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ (Shivamogga) ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ವಿಜಯದಶಮಿ (Vijayadashami) ಮೆರವಣಿಗೆಗೆ ಶೋಭೆ ತರಲು ದಸರಾ ಗಜಪಡೆ ನಗರಕ್ಕೆ ಆಗಮಿಸಿದ್ದು, ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಮೂರು ಆನೆಗಳಿಗೆ (Elephant) ಪೂಜೆ ಸಲ್ಲಿಸಿ, ನಗರಕ್ಕೆ ಸ್ವಾಗತಿಸಲಾಯಿತು.
ಮಹಾನಗರ ಪಾಲಿಕೆ ಹಾಗೂ ದಸರಾ ಸಮಿತಿಯ ವತಿಯಿಂದ ನಗರಕ್ಕೆ ಆಗಮಿಸಿದ ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಬಹದ್ದೂರ್ ಮತ್ತು ಸೋಮಣ್ಣ ಅವರಿಗೆ ಆತ್ಮೀಯ ಹಾಗೂ ಭವ್ಯ ಸ್ವಾಗತ ಕೋರಲಾಯಿತು.
ಮಂಗಳವಾದ್ಯ, ಶಾಸ್ತ್ರೋಕ್ತ ಪೂಜೆಯೊಂದಿಗೆ ಆತ್ಮೀಯ ಸ್ವಾಗತ ನಗರಕ್ಕೆ ಬಂದಿಳಿದ ಗಜಪಡೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪೂರ್ಣಕುಂಭ ಮತ್ತು ಮಂಗಳ ವಾದ್ಯಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಆನೆಗಳಿಗೆ ಹಾರ ಹಾಕಿ, ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಸಲ್ಲಿಸಿ, ಹಣ್ಣು-ಹಂಪಲು ನೀಡಿ ಗೌರವಿಸಲಾಯಿತು.

ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಸಾಗರ್, ಬಹದ್ದೂರ್ ಹಾಗೂ ಸೋಮಣ್ಣ ಆನೆಗಳು ಪ್ರಮುಖ ಆಕರ್ಷಣೆಯಾಗಿದ್ದು, ಮೆರವಣಿಗೆಯ ಗಾಂಭೀರ್ಯವನ್ನು ಹೆಚ್ಚಿಸಲಿವೆ. ಆನೆಗಳ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಾಗೂ ಆನೆ ಪ್ರಿಯರು ಗಜಪಡೆಯನ್ನು ಕಣ್ಣುಂಬಿಕೊಳ್ಳಲು ಆಗಮಿಸಿದ್ದರು.
Also Read>> ಬೆಂಗಳೂರು ವಿಭಾಗದಲ್ಲಿ 10 ರೈಲುಗಳ ಮಾರ್ಗ ಬದಲಾವಣೆ
ಆನೆಗಳ ಆಗಮನದಿಂದಾಗಿ ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬದ ವಾತಾವರಣ ಇನ್ನಷ್ಟು ರಂಗೇರಿದ್ದು, ಐತಿಹಾಸಿಕ ವಿಜಯದಶಮಿ ಮೆರವಣಿಗೆಗೆ ಅತಿಥಿ ಗಜಪಡೆ ಸಂಪೂರ್ಣವಾಗಿ ಸಜ್ಜಾಗುತ್ತಿದೆ.
Shivamogga : ಶಿವಮೊಗ್ಗ ದಸರಾ ಜಂಬೂಸವಾರಿಗೆ ಗಜಪಡೆ ತಾಲೀಮು ಶುರು!
ಶಿವಮೊಗ್ಗದಲ್ಲಿ ಸಾಗರ್ ಆನೆ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಮತ್ತು ಬೆಳ್ಳಿ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದು, ಸೋಮಣ್ಣ ಮತ್ತು ಬಹದ್ದೂರ್ ಆನೆಗಳು ಸಾಲಾನೆಗಳಾಗಿ ಭಾಗವಹಿಸಲಿವೆ.
ಜಂಬೂ ಸವಾರಿಯು ಕೋಟೆ ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್ ತನಕ ಸಾಗಲಿದ್ದು, ಈ ಮಾರ್ಗದಲ್ಲಿ ಸಾಗಲು ಮತ್ತು ಜನ ಜಂಗುಳಿ, ವಾಹನ ದಟ್ಟಣೆಗೆ ಆನೆಗಳು ಹೊಂದಿಕೊಳ್ಳಲು ಇಂದು ಬೆಳಗ್ಗೆ ತಾಲೀಮು ನಡೆಸಲಾಯಿತು. ಫ್ರೀಡಂ ಪಾಕ್೯ಗೆ ಕರೆತಂದು ಪಟಾಕಿ ಸಿಡಿಸಿ ಆನೆಗಳು ಗಾಬರಿಯಾಗದಂತೆ ತಾಲೀಮು ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













