ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ನಡೆದ ಡಿಸಿಸಿ ಬ್ಯಾಂಕ್‍ನ #DCC Bank ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥಗೌಡ #R M Manjunath Gowda ಪುನರಾಯ್ಕೆಯಾದರೆ ಎಸ್.ಕೆ. ಮರಿಯಪ್ಪ #S K Mariyappa ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಈ ಬಾರಿ ಯಾರು ಆಯ್ಕೆಯಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆರಂಭ ಮಂಜುನಾಥಗೌಡ ಹಾಗೂ ಎಸ್ ಕೆ ಮರಿಯಪ್ಪ ಅವರನ್ನು ಹೊರತುಪಡಿಸಿದರೆ ಬೇರೆ ಯಾರು ಕೂಡ ನಾಮಪತ್ರ ಸಲ್ಲಿಸಲಿಲ್ಲ.
Also read: ಮಕ್ಕಳಿಗೆ ಭಾವನಾತ್ಮಕ, ಸಾಮಾಜಿಕ ಬುದ್ದಿವಂತಿಕೆ ಕಲಿಸಿ | ಡಾ.ಸಂಧ್ಯಾ ಕಾವೇರಿ ಕರೆ
ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ಹೊರೆತು ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥಗೌಡ ಹಾಗೂ ಉಪಾಧ್ಯಕ್ಷರಾಗಿ ಎಸ್ ಕೆ ಮರಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್‍ನಲ್ಲಿ 13ಜನ ನಿರ್ದೇಶಕರಿದ್ದು, ಇದರಲ್ಲಿ 11 ಜನ ಆರ್.ಎಂ.ಮಂಜುನಾಥಗೌಡರ ಪರವಾಗಿದ್ದಾರೆ. ಮಂಜುನಾಥ ಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಡಿಸಿಸಿ ಬ್ಯಾಂಕ್ ನಲ್ಲಿ ಅವರ ಹಿಡಿತ ಏನೆಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post