ಕಲ್ಪ ಮೀಡಿಯಾ ಹೌಸ್ | ಬ್ಯಾಕೋಡು(ಸಾಗರ) |
ನಿರ್ಮಾಣ ಹಂತದಲ್ಲಿದ್ದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯೊಂದು ಅಪಾಯದಲ್ಲಿದ್ದು ಕುಸಿದು ಹೋಗುತ್ತಿರುವ ಘಟನೆ ಕುದರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಪಿಡಿಓ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ನಿರ್ಲಕ್ಷ್ಯ ಬಾವಿ ಕಾಮಗಾರಿ ಕುಸಿಯುತ್ತಿರುವುದಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬಾವಿ ತೋಡಿ ಬಿಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಪಂಚಾಯತ್ ವ್ಯಾಪ್ತಿಯ ಹೊನಗೋಡು ಗ್ರಾಮದಲ್ಲಿ ಕಳೆದ 10 ತಿಂಗಳ ಹಿಂದೆ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಕಾಮಗಾರಿಯೊಂದು ಪ್ರಾರಂಭವಾಗಿತ್ತು. 10 ತಿಂಗಳು ಕಳೆದರೂ ಅಧಿಕಾರಿಗಳು ಕಾಮಗಾರಿ ಮುಗಿಸುವ ಗೋಜಿ ಹೋಗಿಲ್ಲ. ಸುಮಾರು 30 ಅಡಿ ಆಳದ ಬಾವಿ ತೋಡಿ ಬಿಟ್ಟಿದದ್ದುಅಪಾಯಕ್ಕೆ ಎಡೆಮಾಡಿಕೊಡುವಂತಿದೆ. ಕಾಮಗಾರಿಯನ್ನು ಮುಗಿಸುವಂತೆ ಸಾರ್ವಜನಿಕರು ಹತ್ತಾರು ಭಾರಿ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
Also read: ಡಿಸಿಸಿ ಬ್ಯಾಂಕ್ | ಆರ್’ಎಂಎಂ ಅಧ್ಯಕ್ಷ, ಮರಿಯಪ್ಪ ಉಪಾಧ್ಯಕ್ಷರಾಗಿ ಆಯ್ಕೆ
ಕಾಮಗಾರಿ ವ್ಯಚ್ಚ ಮುಖಾಂತರ ಬಾವಿಗೆ ರಿಂಗ್ ಹಾಕಿಸಿ ಕಾಮಗಾರಿ ಮುಗಿಸಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಬಾವಿ ಕುಸಿತಕ್ಕೆ ಕಾರಣವಾಗಿದೆ. ಒಂದೆಡೆ ಸರ್ಕಾರ ಅಭಿವೃದ್ದಿ ಕಾರ್ಯಕ್ಕೆ ಸಾಕಷ್ಟು ಹಣ ಇದೆ ಎನ್ನುತ್ತಿದ್ದರೆ ಇತ್ತ ಕುದರೂರು ಗ್ರಾಪಂ ಅಧಿಕಾರಿಗಳು ಮಾತ್ರ ಬಾವಿ ಕಾಮಗಾರಿ ಅರೆ ಬರೆಯಾಗಿ ಮಾಡಿ ಬಿಟ್ಟಿದ್ದು ಸರ್ಕಾರದ ಹಣವನ್ನ ಪೋಲು ಮಾಡುತ್ತಿದ್ದಾರೆ. ಹೀಗೆ ಹಣ ಪೋಲಾಗುತ್ತಿರುವುದರಲ್ಲಿ ಪಂಚಾಯತ್ ಅಧಿಕಾರಿಗಳ ದಿನ್ಯ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ ಅಂತಾರೆ ಗ್ರಾಮದ ಮೋಹನ್.
ಇನ್ನು ಕಾಮಗಾರಿ ನಡೆಸುವಾಗ ಸುರಕ್ಷಿತ ಕ್ರಮ ವಹಿಸಬೇಕಿದ್ದ ಅಧಿಕಾರಿಗಳು ಸರಿಯಾದ ಸುರಕ್ಷತೆ ಕ್ರಮ ಸಹ ವಹಿಸಿಲ್ಲ. 10 ತಿಂಗಳಿಂದ ಅರೆ ಬರೆ ಕಾಮಗಾರಿ ನಡೆಸಿ ಸುರಕ್ಷತಾ ಕ್ರಮವನ್ನೂ ವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಮಳೆಯಿಂದ ಕುಸಿತವಾಗುತ್ತಿರುವ ಬಾವಿಗೆ ರಿಂಗ್ ಹಾಕಿಸಿ ಶಾಶ್ವತ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಸಾರ್ವಜನಿಕರ ದೂರಿನ ಹಿನ್ನೆಲೆ ಈಗ ಕಾಟಾಚಾರಕ್ಕೆ ಬಾವಿ ಸುತ್ತ ನೆಟ್ ಕಟ್ಟಿ ಹೋಗಿದ್ದಾರೆ. ಹಾಗಾದ್ರೆ ಒಂದು ಬಾವಿ ಕಾಮಗಾರಿ ಮುಗಿಸಲು ಗ್ರಾಮ ಪಂಚಾಯತ್’ಗೆ ಎಷ್ಟು ತಿಂಗಳು ಬೇಕು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಜನ ಜಾನುವಾರುಗಳು ತಿರುಗಾಡುವ ಸ್ಥಳದಲ್ಲಿ ಅರೆ ಬರೆ ಕಾಮಗಾರಿ ನಡೆಸಿದ್ದು ಏನಾದರು ಅನಾಹುತವಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಎತ್ತಿದ್ದಾರೆ ಗ್ರಾಮಸ್ಥರಾದ ಕೃಷ್ಣಪ್ಪ.
ಅನುಮಾನಕ್ಕೆ ಕಾರಣವಾದ ಕಾಮಗಾರಿ
ಇನ್ನು ಕಾಮಗಾಗಿ ಬಗ್ಗೆ ಖುದ್ದಾಗಿ ಪಿಡಿಓ ಅವರಿಗೆ ಹತ್ತಾರು ಬಾರಿ ಮನವಿ ಮಾಡಿದರು ಕಾಮಗಾರಿ ಪೂರ್ಣ ಮಾಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದಿಂದ ಒಂದೂವರೆ ಲಕ್ಷ ಹಣ ಮಂಜೂರಾದರೂ ಕಾಮಗಾರಿ ಯಾಕೆ ರಿಂಗ್ ಹಾಕುವ ಕೆಲಸ ಆಗಿಲ್ಲ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಹೀಗೆ 10 ತಿಂಗಳಿAದ ನೆನೆಗುದಿಗೆ ಬಿದ್ದಿದ್ದನ್ನ ನೋಡಿದರೆ ಅಧಿಕಾರಿಗಳು ಅವ್ಯವಹಾರ ನಡೆಸಿರುವ ಬಗ್ಗೆ ಕೂಡ ಅನುಮಾನ ಮೂಡುತ್ತಿದೆ.
ಪಿಡಿಓ ನಿರ್ಲಕ್ಷ್ಯದಿಂದಲೇ ಅಪಾಯದಲ್ಲಿ ಕಾಮಗಾರಿ
ಕಾಮಗಾರಿ ಅಪಾಯದಲ್ಲಿರುವುದಕ್ಕೆ ಪಂಚಾಯತ್ ಪಿಡಿಓ ನಿರ್ಲಕ್ಷ್ಯ ಮುಖ್ಯ ಕಾರಣವಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿದ್ದುಕೊಂಡು ಸಾರ್ವಜನಿಕರ ಕೆಲಸ ಮಾಡಬೇಕಿದ್ದ ಪಿಡಿಓ ದೂರದ ತಾಲೂಕು ಕೇಂದ್ರ ಸಾಗರದಲ್ಲಿ ಮನೆ ಮಾಡಿಕೊಂಡು ನೆಲೆಸಿರುತ್ತಾರೆ. ಹಿನ್ನೀರಿನ ಗ್ರಾಮವಾಗಿರುವ ಪಂಚಾಯತ್ ವ್ಯಾಪ್ತಿಯಲ್ಲಿ ಏನೇ ಸಮಸ್ಯೆಯಾದರೂ ಅಧಿಕಾರಿಗಳು ಜನರ ಕೈಗೆ ಸಿಗುವುದಿಲ್ಲ ಎನ್ನುವುದು ಗ್ರಾಮಮಸ್ಥರ ದೂರಾಗಿದೆ. ನಾವು ಯಾವುದೇ ಕೆಲಸಕ್ಕಾದರೂ ಪಂಚಾಯತ್ ಗೆ ಹೋಗಿ ಕೇಳಿದರೆ ಪಿಡಿಓ ರಜೆಯಲ್ಲಿದ್ದಾರೆ ಎನ್ನುವ ಉತ್ತರ ಬರುತ್ತದೆ. ಅದಾಗಿಯೂ ಫೋನ್ ಮೂಲಕ ಸಂಪರ್ಕಕ್ಕೆ ಪ್ರಯತ್ನಪಟ್ಟರೆ ಅವರು ನಮ್ಮ ಫೋನ್ ಕರೆಯನ್ನೂ ಸ್ವೀಕರಿಸಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post