ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಡಿ. 31 ನೆಯ ಮಂಗಳವಾರ ಸಂಜೆ 6 ಕ್ಕೆ ಆರ್. ಎಂ. ಎಲ್. ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸಾಹಿತ್ಯ ಹುಣ್ಣಿಮೆ 232 ನೆಯ ತಿಂಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಡಿ. ಮಲ್ಲೇಶಪ್ಪ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎಸ್. ಜಿ. ಶ್ರೀನಿವಾಸ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಹಾದೇವಿ, ಸಮಾಜ ಕಲ್ಯಾಣ ಇಲಾಖೆ ಸಹ ನಿರ್ದೇಶಕರಾದ ಕೆ. ಎನ್. ಸುರೇಶ್, ನಿಲಯ ಪಾಲಕರಾದ ಧನಲಕ್ಷ್ಮಿ ಅವರು ಭಾಗವಹಿಸಲಿದ್ದಾರೆ.
Also read: ಬೆಂಗಳೂರು | ಜನವರಿ 2ರಂದು ದಾಸರ ಪದಗಳ ಗಾಯನ ಕಾರ್ಯಕ್ರಮ
ಗಾಯಕರಾದ ಸಾಕಮ್ಮ, ರಂಜಿತಾ ಎಲ್. ಸಿ., ಮಾನಸ, ಚಂದನ ಎಲ್., ಪ್ರಿಯಾಂಕಾ ಎನ್., ಹಾಡು ಹೇಳಲಿದ್ದಾರೆ. ಅಭಿನಯ ಎಂ. ಕಥೆ ಹೇಳಲಿದ್ದಾರೆ. ಹಾಸ್ಯ ಕಲಾವಿದೆ, ದೂರದರ್ಶನ ಖ್ಯಾತ ರಾದ ಕವಿತಾ ಸುದೀಂದ್ರ, ಕವಿಗಳಾದ ವಿಸ್ಮಿತಾ ವಿ., ಐಶ್ವರ್ಯ ಹನುಮಂತಪ್ಪ, ಸಹನಾ ಬಿ. ಎಸ್., ರಮ್ಯ ಎಚ್. ಜಿ., ಕವನ ವಾಚಿಸಲಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭಾವನ ಎಚ್. ಬಿ., ಭದ್ರಾವತಿ, ಮೊಹಮ್ಮದ್ ಕೈಫ್, ಆಯನೂರು, ಸುತ್ರಿಕಾ ಎನ್. ದೊಡ್ಡಗೌಡ್ರು, ಭದ್ರಾವತಿ ಇವರುಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಭಾಗವಹಿಸಲು ಡಿ. ಮಂಜುನಾಥ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















