ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೋದಿ ಸರ್ಕಾರ 9 ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವೆಂದು ನಂಬಿಸುವ ಕಾಂಗ್ರೆಸ್ ಹುನ್ನಾರವನ್ನು ಜನರಿಗೆ ತಿಳಿಸಿ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಮೋರ್ಚಾಗಳ ಸಂಯುಕ್ತ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೃಷಿ ಸಮ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ 3 ಲಕ್ಷ ಕೋಟಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಕಳೆದ 9 ವರ್ಷಗಳಲ್ಲಿ ರೈತರಿಗೆ 15ಲಕ್ಷ ಕೋಟಿ ಬೆಂಬಲ ಬೆಲೆ ನೀಡಿ ಅವರಿಗೆ ಆರ್ಥಿಕವಾಗಿ ಮೇಲೆತ್ತುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ರೇತರಿಗೆ ರಸಗೊಬ್ಬರ ಸಬ್ಸಿಡಿ ನೀಡಲಾಗಿದೆ. ರಾಜ್ಯದಲ್ಲಿ ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದಾಗ ರೈತರ 10ಹೆಚ್‍ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲಾಗಿತ್ತು. ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಪಂಗಡ ನಿಗಮಗಳನ್ನು ಮಾಡಿ, ಸಹಕಾರ ನೀಡಲಾಗಿತ್ತು. ಅಲ್ಪ ಸಂಖ್ಯಾತರಿಗೆ ಕೂಡ ಬಿಜೆಪಿ ಸರ್ಕಾರದಲ್ಲಿ ಹೆಚ್ಚಿನ ಅನುಕೂಲ ನೀಡಲಾಗಿತ್ತು.ಆದರೆ ಕಾಂಗ್ರೆಸ್ ಕೇವಲ ಆ ಸಮುದಾಯವನ್ನು ಮಿಸ್‍ಲೀಡ್ ಮಾಡುತ್ತಾ ಪೊಳ್ಳು ಭರವಸೆ ನೀಡಿ ಇಷ್ಟು ವರ್ಷ ತುಷ್ಟೀಕರಣ ಮಾಡುತ್ತಾ ಬಂದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಅದನ್ನುಆ ಸಮುದಾಯ ಅರ್ಥ ಮಾಡಿಕೊಳ್ಳಬೇಕು.ಅವರನ್ನುಕೂಡ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ ಎಂದರು.
ಕಾಮನ್ ಸಿವಿಲ್ ಕೋಡ್ ಯಾವುದೇ ಧರ್ಮದ ವಿರುದ್ಧವಲ್ಲ. ಒಂದೇ ದೇಶ, ಒಂದೇ ಕಾನೂನು ಬೇಕುಎಂಬುದು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಕನಸಾಗಿತ್ತು. ಇಂದು ಅವರ ಜನ್ಮದಿನಾಚರಣೆ. ಮೋದಿ ಸರ್ಕಾರ 370 ವಿಧಿಯನ್ನು ರದ್ದುಗೊಳಿಸಿ ಅವರ ಆಶಯವನ್ನು ಅನುಷ್ಠಾನಗೊಳಿಸಿದ್ದಾರೆ. ಸಂಪರ್ಕ್ ಸೆ ಸಮರ್ಥನ್ ಮತ್ತು ವಿಕಾಸ ತೀರ್ಥ ಯಾತ್ರೆ ಮೂಲಕ ಕಾರ್ಯಕರ್ತರು ಬಿಜೆಪಿ ಸರ್ಕಾರದ ಸಾಧನೆಯನ್ನು ತಿಳಿಸಬೇಕಾಗಿದೆ. ಕನಿಷ್ಠ 2 ಗಂಟೆ ಸಮಯವನ್ನು ಪಕ್ಷಕ್ಕಾಗಿ ನೀಡಿ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರವೊಂದರಲ್ಲೇ ನನ್ನ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ಅನುದಾನವನ್ನು ಎಲ್ಲಾ ಸಮುದಾಯಗಳ ಸಾವಿರಕ್ಕೂ ಹೆಚ್ಚು ಭವನ ನಿರ್ಮಾಣಕ್ಕೆ ನೀಡಲಾಗಿದೆ. ಸ್ವಾಭಿಮಾನದ ಬದುಕಿಗೆ ಅನೇಕ ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ಮೋದಿಜೀಯವರ ಕನಸಾಗಿದ್ದು, ದೇಶಾದ್ಯಂತ ಎಲ್ಲಾ ವರ್ಗಕ್ಕೂನ್ಯಾಯ ಒದಗಿಸಲಾಗಿದೆ ಎಂದರು.
Also read: ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ ವಿಶ್ವದಲ್ಲೇ ಅತಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹ: ಎಲ್ಲಿ? ಯಾವಾಗ?
ಕಾಂಗ್ರೆಸ್ ಪೊಳ್ಳು ಭರವಸೆ ಮತ್ತು ಅಪಪ್ರಚಾರದಿಂದ ಪಕ್ಷಕ್ಕೆ ತಾತ್ಕಾಲಿಕ ಹಿನ್ನಡೆಯಾಗಿರಬಹುದು. ಮೋದಿ ಸರ್ಕಾರದ ಸಾಧನೆ ನಮ್ಮ ಮುಂದಿದೆ. ದೇಶ ಕಟ್ಟುವ ಕೆಲಸ ಮಾಡೋಣ ಎಂದರು.
ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್ ಪುತ್ತೂರು ಮಾತನಾಡಿ, ಸ್ವಾತಂತ್ರ್ಯದ ನಂತರ ನಮ್ಮ ದೇಶದ ಸಂಸ್ಕøತಿ, ಪರಂಪರೆಮತ್ತು ಏಕತೆಗಾಗಿ ಮೊದಲು ಬಲಿದಾನ ಮಾಡಿದವರು ಡಾ. ಶ್ಯಾಮ್‍ಪ್ರಸಾದ್ ಮುಖರ್ಜಿ. ಏಕ್ ದೇಶ್ ಮೆ ದೋ ವಿಧಾನ್, ನಹಿ ಚಲೇಗಾ ಎಂದು ಆಂದೋಲನ ಮಾಡಿದ ಡಾ. ಶ್ಯಾಮ್‍ಪ್ರಸಾದ್ ಅವರ ಉದ್ದೇಶವನ್ನು ಮೋದಿಜೀ ಸರ್ಕಾರ ಈಡೇರಿಸಿದೆ ಎಂದರು.
ಈ ದೇಶದಲ್ಲಿ 2 ಧ್ವಜ, 2 ಪ್ರಧಾನಿ ಎಂಬ ದುಸ್ಥಿತಿ ಇತ್ತು. ಕಾಶ್ಮೀರವನ್ನು ಮುಕ್ತಗೊಳಿಸಿ ದೇಶಕ್ಕೆ ಏಕತೆಯ ಕೊಡುಗೆ ನೀಡಿದ್ದಾರೆ. ನಮ್ಮ ಸಂಸ್ಕøತಿ ಮತ್ತು ಮುಂದಿನ ಪೀಳಿಗೆಗೆ ಸೇತುವ ಕಟ್ಟುವ ಕೆಲಸ ಮಾಡಿ ವಿಶ್ವದ 190ಕ್ಕೂ ಹೆಚ್ಚು ದೇಶಗಳು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಯೋಗ ದಿನಾಚರಣೆ ಮಾಡಿ ಮೋದಿಜೀಗೆ ಬೆಂಬಲ ಸೂಚಿಸಿದ್ದಾರೆ. 500 ವರ್ಷದ ಹೋರಾಟ ಮಾಡಿದರೂ ನಿರ್ಮಾಣವಾಗದ ರಾಮಮಂದಿರವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡುತ್ತಿದೆ. ದೇಶದ ಜನತೆ ಭಾರತದ ಸಂಸ್ಕøತಿ ಮತ್ತು ಪರಂಪರೆ ಉಳಿವಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಂಜುನಾಥ್, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋP ಮೂರ್ತಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷಎಂ.ಬಿ. ಹರಿಕೃಷ್ಣ, ಪ್ರಮುಖರಾದ ದಿನೇಶ್ ಬುಳ್ಳಾಪುರ, ವೀರಭದ್ರ ಪೂಜಾರಿ, ನಾಗರಾಜ್ ತಮ್ಮಡಿಹಳ್ಳಿ, ಸೌಮ್ಯ ಭೋಜನಾಯ್ಕ್ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post