ಸಮಾಜ ಕಲ್ಯಾಣ ಇಲಾಖೆಯವರು ಮಹಿಳಾ ಕರಾಟೆ ತರಬೇತಿದಾರರಿಗೆ ನೀಡಬೇಕಾದ ಗೌರವಧನವನ್ನು ಪಾವತಿಸುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಮಹಿಳಾ ತರಬೇತುದಾರರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 2021-22 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಕರಾಟೆ ತರಬೇತಿ ನೀಡಿದ ಮಹಿಳಾ ಕರಾಟೆ ತರಬೇತಿದಾರರಿಗೆ ಒಂದುವರೆ ವರ್ಷವಾದರೂ ಈವರೆಗೂ ಗೌರವಧನ ಪಾವತಿ ಆಗಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯ ಕ್ರೈಸ್ಟ್ ವಸತಿ ಶಾಲೆಗಳಲ್ಲಿ ತರಬೇತಿ ಪೂರೈಸಿದ ಮಹಿಳಾ ತರಬೇತಿದಾರರಿಗೂ ಹಣಪಾವತಿ ಆಗಿಲ್ಲ ಎಂದು ಮನವಿದಾರರು ಆರೋಪಿಸಿದರು.
ಇದರಿಂದ ಸ್ವಂತ ಖರ್ಚಿನಲ್ಲಿ ಹೋಗಿ ಬಂದು ತರಬೇತಿಯನ್ನು ಪೂರೈಸಿರುವ ಮಹಿಳಾ ತರಬೇತುದಾರರಿಗೆ ತೊಂದರೆಯಾಗಿದ್ದು, ಈ ಕುರಿತು ರಾಜ್ಯ ಕರಾಟೆ ಅಸೋಸಿಯೇಷನ್ ರಾಜ್ಯಮಟ್ಟದಲ್ಲಿ ಇಲಾಖೆಗೆ ಮನವಿಗಳನ್ನು ನೀಡಲಾಗಿದೆ. ಆದರೂ ಈವರೆಗೂ ಗೌರವಧನ ಪಾವತಿಸುತ್ತಿಲ್ಲ ಎಂದು ದೂರಿದರು.
ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಮಹಿಳಾ ಕರಾಟೆ ತರಬೇತುದಾರರಿಗೆ ನೀಡಲು ಬಾಕಿ ಇರುವ ಗೌರವ ಧನವನ್ನು ಪಾವತಿಸಲು ಸೂಚಿಸುವಂತೆ ಕ್ರಮ ವಹಿಸಬೇಕಾಗಿ ಮನವಿಯಲ್ಲಿ ಆಗ್ರಹಿಸಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ತರಬೇತುದಾರರ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post