ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿದ್ಧರಾಮಯ್ಯ ಎರಡು ಕ್ಷೇತ್ರ ಅಲ್ಲ, 25 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಸೋಲು ನಿಶ್ಚಿತ. ಕಾಂಗ್ರೆಸ್ ನಾಯಕರು ಮತ್ತು ದೇವೇಗೌಡರು ಸೇರಿ ಸಿದ್ದುಗೆ ಸೋಲಿಸುವುದು ಗ್ಯಾರಂಟಿ. ಕೋಲಾರದಲ್ಲಿ ಸಿದ್ಧರಾಮಯ್ಯ ಗೆಲ್ಲುವ ಚಾನ್ಸೇ ಇಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ K S Eshwarappa ಕುಹಕವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿದ್ದು, ಮುನಿಯಪ್ಪ, ಖರ್ಗೆ, ಪರಮೇಶ್ವರ್ ಇವರನ್ನೂ ಸೋಲಿಸಿದ್ದಾರೆ. ಈಗ ಅದೇ ಕಾಂಗ್ರೆಸ್ ನಾಯಕರು ಇವರನ್ನು ಸೋಲಿಸುತ್ತಾರೆ.
ಸ್ಯಾಂಟ್ರೋ ರವಿ ವಿರುದ್ಧ ಸೂಕ್ತ ಕ್ರಮ ಜರುಗಿಸಲಿ
ಈಗಾಗಲೇ ಸ್ಯಾಂಟ್ರೋ ರವಿ ಬಂಧನವಾಗಿದ್ದು, ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತಾರೆ. ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಯಾರೇ ಪ್ರಕರಣದಲ್ಲಿದ್ದರು ಅವರ ವಿರುದ್ಧ ನಿಷ್ಪಕ್ಷಪಾತ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಮಹಿಳೆಯರನ್ನು ಇಟ್ಟುಕೊಂಡು ಆತ ಮಾಡಿರುವ ದಂಧೆಗೆ ಕ್ಷಮೆ ಇಲ್ಲ. ಇಂತಹ ವ್ಯಕ್ತಿ ಇತಿಹಾಸದಲ್ಲೇ ಮೊದಲು ಎನಿಸುತ್ತದೆ. ವಿನಾಕಾರಣ ಗೃಹ ಸಚಿವರು ಸೇರಿದಂತೆ ಇತರರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ವಿರುದ್ಧ ಕೂಡಾ ಸಾಕಷ್ಟು ಆರೋಪ ಮಾಡಬಹುದು. ಮತ್ತೊಬ್ಬರನ್ನು ಕಳ್ಳ ಎಂದು ಬಿಂಬಿಸಿ, ತಾನು ಸಾಚಾ ಎಂದು ತೋರಿಸಿಕೊಳ್ಳುವುದು ಎಷ್ಟು ಸರಿ? ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆ ಯಾವ ರೀತಿ ಯಲ್ಲಿ ಆಗಬೇಕೆಂದು ನಿರ್ಧಾರ ಮಾಡುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆ ನಾನು ತಲೆಕೆಡಿಸಿಕೊಂಡಿಲ್ಲ
ಸಚಿವ ಸಂಪುಟ ವಿಸ್ತರಣೆ ಕುರಿತು ನಾನು ತಲೆಕೆಡಿಸಿಕೊಂಡಿಲ್ಲ. ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದರು.
ಮೀಸಲಾತಿ ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ
ಮೀಸಲಾತಿ ಹೋರಾಟ ಮುಗಿದು ಹೋದ ಕಥೆ. ಅದರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುವ ಆಸೆ ಇದ್ದರೆ, ಮಾಡಿಕೊಳ್ಳಲಿ. ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಿಂದೆ ಹೇಗಿತ್ತು ಹಾಗೇ ಮುಂದುವರೆಸಿ ಎಂದು ಅವರು ಏನಬೇಕಾದರೂ ಮಾಡಲಿ ಎಂದರು.
ಫ್ರೀಡಂ ಪಾರ್ಕ್‌ನಲ್ಲಿ ಕುಳಿತು ಹೋರಾಟ ಮಾಡುವುದರಿಂದ ಮೀಸಲಾತಿ ಸಿಗುತ್ತಿದ್ದರೆ, ಬಹಳ ಜನ ಬಂದು ಅಲ್ಲಿ ಹೋರಾಟ ಮಾಡುತ್ತಿದ್ದರು. ಎಲ್ಲಾ ಸಮಾಜದವರು ಮೀಸಲಾತಿ ಬೇಕು ಅಂತಾರೆ. ಅವರು ಕಾನೂನು ತಜ್ಞರ ಜೊತೆ ಕುಳಿತು ಚರ್ಚೆ ಮಾಡಲಿ ಎಂದರು.
ಎಸ್ಟಿ ಬೇಕು ಅಂತಾ ನಾನು ಹೇಳಿರುವೆ. ನನಗೆ ಏನು ಕಮ್ಮಿ ಆಗಿದೆ. ಮೀಸಲಾತಿ ಮೂಲಕ ಖರ್ಗೆ ಸಂಸದರು ಆಗುತ್ತಾರೆ. ಅದು ಅವಶ್ಯಕತೆ ಇದೆಯಾ? ಅವರ ಮಗ ಪ್ರಿಯಾಂಕ ಖರ್ಗೆ ಅದರ ಮೂಲಕ ಶಾಸಕ ಆಗುತ್ತಿರುವುದು, ಬಿಟ್ಟು ಕೊಡಲಿ ಬೇರೆ ಅವರಿಗೆ. ಅಂಬೇಡ್ಕರ್ ಕೊಟ್ಟಿರುವ ಮೀಸಲಾತಿ ನಿಮ್ಮ ಕುಟುಂಬವೇ ಬಳಸಿಕೊಳ್ಳಲಿ ಅಂತೆನೂ ಹೇಳಿಲ್ಲ. ನೀವು ಒಂದು ರೂಪಕ್ಕೆ ಬಂದ ಬಳಿಕ ಮೀಸಲಾತಿ ಬೀಡಬೇಕು. ಇವರು ಬಿಡಲು ತಯಾರು ಇಲ್ಲ. ಕೋರ್ಟ್ ಪಂಚಮಸಾಲಿ ಕುರಿತು ಏನು ತೀರ್ಪು ಕೊಟ್ಟಿದೆ ಅದನ್ನು ನಾವು ಗೌರವಿಸಬೇಕೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post