ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಟುಂಬದಲ್ಲಿ ಹೆಣ್ಣಿರಲಿ ಗಂಡಿರಲಿ ಮನೆಗೊಂದು ಕ್ರೀಡಾಪಟುವಿರಲಿ ಎಂದು ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಇಮ್ತಿಯಾಜ್ ಅಹಮದ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಲೇಜಿನ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಸೋಲುಗಳಿಂದ ಹೊಸತನದ ಚಿಂತನೆಗಳಿಗೆ ಪ್ರೇರಣೆ ಪಡೆಯಿರಿ. ಬದುಕಿನ ಸೋಲುಗಳು ಕಾಲವೆಂಬ ಹಾದಿಯಲ್ಲಿ ಕಣ್ಮರೆಯಾಗುತ್ತದೆ. ಅದರಿಂದ ಪಡೆದ ಅನುಭವ ಬದುಕಿನುದ್ದಕ್ಕೂ ನಿರಂತರವಾಗಿ ಉಪಯೋಗಕ್ಕೆ ಬರುತ್ತದೆ.
Also read: ಆಗುಂಬೆ ಘಾಟಿಯಲ್ಲಿ ಟನಲ್ ನಿರ್ಮಾಣ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಸಮಯದ ನಿರ್ವಹಣೆ ಮಾಡಿಕೊಳ್ಳಿ. ದೈಹಿಕ ಸಾಮರ್ಥ್ಯ ಉನ್ನತಿಗಾಗಿ ಆನ್ಲೈನ್ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಎಂಟು ಗಂಟೆಯ ನಿದ್ದೆ, ದಿನದಲ್ಲಿ ಸೇವಿಸಬೇಕಾದ ನೀರು ಆಹಾರ ನಮ್ಮ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮಕಾರಿ ಪ್ರಭಾವ ಬೀರಲಿದೆ.
ಕ್ರೀಡೆಗೆ ಸುಸಜ್ಜಿತ ಮೈದಾನಗಳಿವೆ ಅದರೆ ಆಡುವವರ ಸಂಖ್ಯೆ ಕಡಿಮೆಯಾಗಿದೆ. ಕ್ರೀಡಾ ಮೀಸಲಾತಿಯ ಅಡಿಯಲ್ಲಿ ಅನೇಕ ಸರ್ಕಾರಿ ಉದ್ಯೋಗಗಳು ಲಭ್ಯವಿದೆ. ದೈಹಿಕವಾಗಿ ಎತ್ತರವಾಗಿರಬೇಕು ಎಂದೇನಿಲ್ಲ, ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಎಲ್ಲಾ ಹಂತದ ಜನರು ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ವ್ಯಾಯಾಮ ಎಲ್ಲರಿಗು ಬೇಕಾಗಿರುವ ವಿಚಾರ. ಕೇವಲ ಕ್ರೀಡಾಪಟುಗಳಿಗೆ ಮಾತ್ರ ದೈಹಿಕ ವ್ಯಾಯಾಮ ಸೀಮಿತ ಎಂದು ತಿಳಿಯದಿರಿ. ಮೊಬೈಲ್ ಮಾತ್ರ ಜೀವನ ಎಂಬ ಅಂಧತ್ವ ಬೇಡ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post