ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಅಡಿಕೋ ಕಂಪನಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ನಿರುದ್ಯೋಗಿಗಳಿಗೆ ಭದ್ರಾವತಿಯ ಐಟಿಐ ಕಾಲೇಜಿನಲ್ಲಿ ನೇರ ಸಂದರ್ಶನ ಇದ್ದು, ಇದರ ಸದುಪಯೋಗ ಪಡೆಯಬೇಕೆಂದು ಅಡಿಕೋ ಕಂಪೆನಿ ಮುಖ್ಯಸ್ಥ ಶುಕ್ಲ ತಿಳಿಸಿದರು.
ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.26 ಮತ್ತು 27ರಂದು ಬೆಳಿಗ್ಗೆ 11ರಿಂದ 5 ಗಂಟೆಯ ವರೆಗೆ ಸಂದರ್ಶನ ನಡೆಯಲಿದೆ. ಎಸ್‍ಎಸ್‍ಎಲ್‍ಸಿ. ಪಿಯುಸಿ, ಡಿಪ್ಲಮೋ, ಅಥವಾ ಯಾವುದೇ ಪದವಿ, ಪಡೆದವರು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಅಡಿಕೋ ಕಂಪೆನಿಯು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದು, ಸುಮಾರು 5,500ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಇವೆ. ಪ್ರಾರಂಭಿಕ ವೇತನವೇ 18,700 ರೂ. ಇದ್ದು, ಜೊತೆಗೆ ಇತರ ಸೌಲಭ್ಯಗಳೂ ಇವೆ. ಜಿಲ್ಲೆಯ ಯುವಕ, ಯುವತಿಯರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
Also read: ಎಲ್ಲ ಶಾಸ್ತ್ರ, ವಿಜ್ಞಾನ, ತತ್ವದಲ್ಲೂ ಸಾಹಿತ್ಯ ಅಡಗಿದೆ: ಉಪನ್ಯಾಸಕ ಸುರೇಶ್
ಐಟಿಐ ಕಾಲೇಜಿನ ಪ್ರಾಂಶುಪಾಲ ಕಾಳಿದಾಸ ನಾಯ್ಕ ಮಾತನಾಡಿ, ಅಡಿಕೋ ಕಂಪೆನಿ ಭಾರತದಲ್ಲಿ 30ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಹೆಚ್ಚಿನ ವಿವರಗಳಿಗೆ ಮೊ: 7350079431, 9980129592ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿಲಾಸ್ ಅವಲೆ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















