ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಹೊರವಲಯದ ಉರುಗಡೂರಿನಲ್ಲಿರುವ ಪ್ರಿವ್ಹೇಲ್ ಹೈಸ್ಕೂಲ್ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ವತಿಯಿಂದ ಇಂದು ಆಹಾರದ ಕಿಟ್ ನೀಡಲಾಯಿತು.
ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ಅಧ್ಯಕ್ಷ ಎನ್.ಎಮ್ ಸಿಗ್ಬತ್ ಉಲ್ಲಾ ಮಾತನಾಡಿ, ವಿಶ್ವದಲ್ಲಿ ಕೊರೋನ ಸಾಂಕ್ರಮಿಕ ದಾಳಿಯಿಂದ ಮನುಕುಲ ಕಂಗೆಟ್ಟಿದೆ. ಇದರಿಂದ ಎಲ್ಲಾ ವರ್ಗದ ಕ್ಷೇತ್ರಗಳು ಅತೀವ ಸಂಕಷ್ಟದಲ್ಲಿರುವಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕೂಡ ಲಾಕ್‌ಡೌನ್ ನಲ್ಲಿ ಸಿಲುಕಿಕೊಂಡಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ಸಂಬಳ ಪಡೆದು ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳಲ್ಲಿ ಶ್ರಮಿಸುತ್ತಿರುವ ಇವರಿಗೆ ಅಹಾರದ ಕಿಟ್ ನೀಡಿ ದನಿಯಾಗುವುದು ಆಧ್ಯ ಕರ್ತವ್ಯವೆಂದು ಭಾವಿಸಿದ್ದೇವೆ ಎಂದು ತಿಳಿಸಿದರು.


ಶಿವಮೊಗ್ಗದ ಖಾಸಗಿ ಶಿಕ್ಷಕರು ಹಾಗೂ ಸಿಬ್ಬಂದಿಗಳ ಪಟ್ಟಿ ಮಾಡಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಈ ಮೂಲಕ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಾರಾ.ಶ್ರೀನಿವಾಸ್ ಹಾಗೂ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ಕಾರ್ಯದರ್ಶಿ, ಹೆಚ್.ಎಸ್ ವಿಷ್ಣುಪ್ರಸಾದ್, ಮಲ್ನಾಡ್ ಪುಟ್ವೇರ್ ಮಾಲೀಕರಾದ ಇಮ್ರಾನ್ ಮಲ್ನಾಡ್, ಗೋಲ್ಡ್ ಸ್ಮಿತ್ ಅನಿಲ್ ಕುಮಾರ್, ಸಲೀಂ ಸಾಧಿಕ್, ರಖೀಬ್, ಮುಸಾವಿರ್ ಹಾಗೂ ಪ್ರಿವ್ಹೇಲ್ ಹೈಸ್ಕೂಲ್ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















