ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ 101ನೇ ಸದಸ್ಯ ಮಂಡಳಿ ಸಭೆಯು ಭದ್ರಾ ಕಾಡಾ ಸಭಾಂಗಣದಲ್ಲಿ ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿತವಾದ ವಿಷಯಗಳು ಹಾಗೂ ಕೈಗೊಂಡ ನಿರ್ಣಯಗಳು, ಕಳೆದ ಬಾರಿ ನಡೆದ 100 ನೇ ಮಂಡಳಿ ಸಭೆಯಲ್ಲಿ ತಗೆದುಕೊಂಡು ನಡವಳಿಗಳ ಮೇಲೆ ತಗೆದುಕೊಂಡ ಅನುಪಾಲನಾ ಕ್ರಮಗಳನ್ನು ಮಂಡಿಸಲಾಯಿತು.
ನಂತರ ಕಳೆದ ಸಾಲಿನ 2020-21ನೇ ಸಾಲಿನಲ್ಲಿ ರಾಜ್ಯ 2705 ಲೆಕ್ಕ ಶೀರ್ಷಿಕೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ ಹಾಗೂ ನಬಾರ್ಡ್ ಯೋಜನೆಗಳಿಗೆ ಒಟ್ಟು 1629.52 ಲಕ್ಷ ಅನುದಾನ ಅಂಚಿಕೆಯಾಗಿದ್ದು ಇಲ್ಲಿಯವರೆಗೆ ಒಟ್ಟು 1304.68 ಲಕ್ಷ ಅನುದಾನ ಬಳಕೆಯಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಕೇಂದ್ರ ಯೋಜಿತ 4705 ಲೆಕ್ಕ ಶೀರ್ಷಿಕೆಯಡಿ ಎಸ್.ಡಿ.ಪಿ ಯೋಜನೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ ಕಾಮಗಾರಿಗಳಿಗೆ ಒಟ್ಟು 596.97 ಲಕ್ಷ ಅನುದಾನ ಮಂಜೂರಾಗಿದ್ದು ಸಂಪೂರ್ಣ ಕಾರ್ಯಸಾಧನೆ ಆಗಿದೆ ಎಂಬ ಮಾಹಿತಿ ಸಭೆಯ ಗಮನಕ್ಕೆ ತರಲಾಯಿತು.
ಪಿಎಂಕೆಎಸ್‌ವೈ ಯೋಜನೆಯ ಅನುಸಾರ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ, ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಕಾಮಗಾರಿಗಳಿಗೆ ಒಟ್ಟು 120.34 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಲಾಯಿತು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿ ಹೊಲಗಾಲುವೆ ಮತ್ತು ಆಯಕಟ್ಟು ರಸ್ತೆ ಅಭಿವೃದ್ದಿಗೆ ಒಟ್ಟು 500ಲಕ್ಷ ಅನುದಾನ ಮಂಜೂರಾಗಿದ್ದು, ಇದರಲ್ಲಿ 75ಲಕ್ಷ ವರಾಯಿ ಯೋಜನೆಯಡಿ ಹೊಲಗಾಲುವೆ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
2021-22ನೇ ಸಾಲಿನ 2705 ಲೆಕ್ಕ ಶೀರ್ಷಿಕೆಯಡಿ ಒಟ್ಟು 1016.52 ಲಕ್ಷ, ನಂಜುಂಡಪ್ಪ ವರದಿಯ ಅನುಸಾರ ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ 4705 ಎಸ್.ಡಿ.ಪಿ ಯೋಜನೆಯಡಿ ಬರುವ ಚನ್ನಗಿರಿ, ಹರಪನಹಳ್ಳಿ, ಹಿರಿಕೇರೂರು, ಹಿರಿಯೂರು, ಚಳ್ಳಕೆರೆ, ಹೊನ್ನಾಳಿ, ಹಾನಗಲ್, ಹಾವೇರಿ, ತರೀಕೆರೆ, ಶಿಕಾರಿಪುರ ಮತ್ತು ಶಿರಹಟ್ಟಿ ಮುಂದುವರೆದ ಕಾಮಗಾರಿಗಳು ಸುಮಾರು 158.27ಲಕ್ಷ ಹಾಗೂ ಹೊಸ ಕಾಮಗಾರಿಗಳು ಸುಮಾರು 466.55ಲಕ್ಷ ಮತ್ತು ನಬಾರ್ಡ್ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂಬ ಮಾಹಿತಿಯನ್ನು ಸಭೆಯ ಅವಹಾಗಾಹನೆಗೆ ತರಲಾಯಿತು.
ತಕ್ಷಣಕ್ಕೆ ಭದ್ರಾ ಅಚ್ಚುಕಟ್ಟಿನ ಅಭಿವೃದ್ದಿ ಕಾಮಗಾರಿಗಳಿಗೆ ಪ್ರತಿಯೊಬ್ಬ ನಿರ್ದೇಶಕರಿಗೆ 2 ಕೋಟಿಯಂತೆ ಒಟ್ಟು 25 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು, ಇದರೊಂದಿಗೆ ನಿರ್ದೇಶಕರಿಗೆ ಪ್ರತಿ ಮಂಡಳಿ ಸಭೆಯ ಹಾಜರಾತಿಗೆ ನೀಡುವ ಮೂರು ಸಾವಿರ ಭತ್ಯೆ ಬದಲಾಗಿ ಐದು ಸಾವಿರಕ್ಕೆ ಹೆಚ್ಚಿಸುವಂತೆ ಹಾಗೂ ಪ್ರಯಾಣ ಭತ್ಯೆ, ದಿನ ನಿತ್ಯ ಭತ್ಯೆ ನೀಡುವಂತೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
ಈ-ಟೆಂಡರ್ ಅನುಸಾರ ದೇಶದ ಯಾವುದೇ ಮೂಲೆಯಲ್ಲಿ ಗುತ್ತಿಗೆದಾರ ಕುಳಿತುಕೊಂಡು ಬಿಡ್ ಮಾಡಬಹುದು, ಬಿಡ್ ಮಾಡುವ ಗುತ್ತಿಗೆದಾರ ಕಡಿಮೆ ಬೆಲೆಗೆ ಕೋಟ್ ಮಾಡುವುದರಿಂದ ಹಾಗೂ ಸ್ಥಳೀಯವಾಗಿ ಲಭ್ಯವಿಲ್ಲದಿರುವ ಕಾರಣ ಸ್ಥಳೀಯ ಸಣ್ಣ ಗುತ್ತಿಗೆದಾರರಿಗೆ ಸಬ್ ಕಾಂಟ್ರಾಕ್ಟ್ ನೀಡುವುದರಿಂದ ಕಾಮಗಾರಿಯಲ್ಲಿ ಗುಣ ಮಟ್ಟದ ಕೆಲಸ ನಿರ್ವಹಣೆ ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಈ ನಿಯಮದಲ್ಲಿ ಬದಲಾವಣೆ ತರಲು ಅವಕಾಶವಿದ್ದಲ್ಲಿ ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಿ, ಸ್ಥಳೀಯ ಗುತ್ತಿಗೆದಾರರು ಈ-ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬದಲಾವಣೆ ತರುವಂತೆ ತೀರ್ಮಾನ ಕೈಗೊಳ್ಳಲಾಯಿತು.
ಸುಮಾರು 5 ಲಕ್ಷದ ಕಾಮಗಾರಿಯ ತನಕ ಮಾನ್ಯುಯಲ್ ಟೆಂಡರ್ ಕರೆಯುವ ಹಾಗೆ ಪ್ರಸ್ತಾವನೆ ಸಲ್ಲಿಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶಿವಕುಮಾರ್, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್, ನಿರ್ದೇಶಕರಾದ ವಿನಾಯಕ್, ಮಂಜುನಾಥ್, ಷಡಕ್ಷರಿ, ರುದ್ರ ಮೂರ್ತಿ, ಷಣ್ಮುಖಪ್ಪ, ಸದಾಶಿವಪ್ಪ, ರಾಜಪ್ಪ, ಹನುಮಂತಪ್ಪ ಹಾಗೂ ಸಮಸ್ತ ಭದ್ರಾ ಕಾಡಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post