ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡು ಪೆಟ್ಸ ಲವರ್ಸ್ ವತಿಯಿಂದ ಏ.4ರ ಭಾನುವಾರದಂದು ಸಾಗರದ ಗಾಂಧಿ ಮೈದಾನದಲ್ಲಿ ಶ್ವಾನ ಮತ್ತು ಬೆಕ್ಕಿನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿನಯ್ ರಾಜಾವತ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಾಗರದಲ್ಲಿ ಇಂತಹ ಶ್ವಾನ ಮತ್ತು ಬೆಕ್ಕಿನ ಪ್ರದರ್ಶನವನ್ನು ಸ್ಥಳೀಯರು ನಡೆಸಿದ್ದಾರೆ. ಆದರೆ ಈ ಬಾರಿ ಮೊದಲನೇ ವರ್ಷದ ರಾಜ್ಯ ಮಟ್ಟದ ವಿವಿಧ ತಳಿಯ ಶ್ವಾನ ಮತ್ತು ಬೆಕ್ಕಿನ ಪ್ರದರ್ಶನ ನಡೆಯಲಿದೆ ಎಂದರು.
ಪ್ರದರ್ಶನದಲ್ಲಿ ತೀರ್ಪುಗರರಾಗಿ ಎನ್‌ಆರ್‌ಐ ನವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಬೀದಿ ನಾಯಿಗೆ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಮನುಷ್ಯನ ಪ್ರೀತಿ ಪಾತ್ರವಾದ ಪ್ರಾಣಿ ನಾಯಿ ಮತ್ತು ಬೆಕ್ಕು, ಇದು ಎಂತಹ ವಾತಾವರಣದಲ್ಲಿ ಬದುಕಲಿದೆ ಹಾಗೂ ಎಷ್ಟು ವರ್ಷ ಬದುಕಲಿದೆ ಎಂಬ ಮಾಹಿತಿಯನ್ನೂ ನೀಡಲಾಗುವುದು ಎಂದರು.
ಪ್ರದರ್ಶನಕ್ಕೆ ಭಾಗವಹಿಸುವ ಶ್ವಾನ ಮತ್ತು ಬೆಕ್ಕಿಗೆ ತಲಾ 250ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಸ್ಣಳದಲ್ಲಿ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಪೆಟ್ ಪ್ರಾಣಿಗಳಿಗೆ 350 ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಪ್ರದರ್ಶನದಲ್ಲಿ ಭಾಗಿಯಾಗುವ ಪೆಟ್ ಪ್ರಾಣಿಗಳಿಗೆ ವಿಶೇಷ ಬಹುಮಾನ, ಆಕರ್ಷಕ ಟ್ರೋಫಿಗಳನ್ನ ನೀಡಲಾಗುವುದು. 50 ಸಾವಿರದ ಬಹುಮಾನ ನೀಡಲಾಗುವುದು. ಬೆಸ್ಟ್ ಪಪ್ಪಿ ಅವಾರ್ಡ್‌ಗೆ 3 ಸಾವಿರ, ಬೆಸ್ಟ್ ಇಂಡೊಯನ್ ಬ್ರೀಡ್‌ಗೆ 2000, ಬೆಸ್ಟ್ ಹ್ಯಾಂಡ್ಲರ್ ಹಾಗೂ ಬೆಸ್ಟ್ ಜೂನಿಯರ್ ಹ್ಯಾಂಡ್ಲರ್ ಗೆ ತಲಾ 1 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.
ಶ್ವಾನ ವರ್ಗಗಳಿಗೆ ಮೊದಲನೇ ಬಹುಮಾನವಾಗಿ 15,000ರೂ., ದ್ವಿತೀಯ ಬಹುಮಾನಕ್ಕೆ 10,000ರೂ. ಹಾಗೂ ತೃತೀಯ ಬಹುಮಾನಕ್ಕೆ 7000ರೂ. ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಪ್ರದರ್ಶನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ: 9880178104, ಮೊ: 7676336166 ಸಂಪರ್ಕಿಸಬಹುದಾಗಿದೆ, ಸೆಲ್ಫಿ ಅವಾರ್ಡ್‌ಗೆ ಮೊ:9880178104ಗೆ ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post