ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಗ್ಯ, ಶಿಕ್ಷಣ ಮತ್ತು ಸಮುದಾಯದ ಸೇವೆಗೆ ಒತ್ತು ನೀಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ರೌಂಡ್ ಟೇಬಲ್ ಇಂಡಿಯಾ ನವೆಂಬರ್ ತಿಂಗಳ 9 ರಿಂದ 15ರವರೆಗೆ ದೇಶದಾದ್ಯಂತ ಆರ್.ಟಿ.ಐ ಸಪ್ತಾಹ ವನ್ನು ಆಯೋಜಿಸಿದೆ, ಇದರ ಭಾಗವಾಗಿ ಶಿವಮೊಗ್ಗ ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗದಲ್ಲಿಯೂ ಪರಿಸರ ಜಾಗೃತಿ, ರಕ್ತದಾನ ಶಿಬಿರ, ಶಿಕ್ಷಣ ಜಾಗೃತಿಯಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆರ್.ಟಿ.ಐ ಸಪ್ತಾಹದ ಅಂಗವಾಗಿ ಗುರುವಾರ ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತೆಯಲ್ಲಿ #Sarji Super Specialty Hospital ರೌಂಡ್ ಟೇಬಲ್ ಇಂಡಿಯಾ ಮತ್ತು ಶಿವಮೊಗ್ಗ ರೌಂಡ್ ಟೇಬಲ್ 166 ಇವರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ, ಸಂಸ್ಥೆಯ ರಾಷ್ಟ್ರೀಯ ಆರೋಗ್ಯ ಯೋಜನೆ ‘ಪ್ರಾಜೆಕ್ಟ್ ಹೀಲ್’ ಯೋಜನೆಯಡಿ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸುಧಾರಿಸುವ ಗುರಿಯೊಂದಿಗೆ, ಸರ್ಜಿ ಫೌಂಡೇಶನ್ ಗೆ ಸುಸಜ್ಜಿತ ಸೌಲಭ್ಯವುಳ್ಳ ಆಂಬ್ಯುಲೆನ್ಸ್ ವಾಹನವನ್ನು ಶಿವಮೊಗ್ಗ ರೌಂಡ್ ಟೇಬಲ್ 166 ಪದಾಧಿಕಾರಿಗಳು ಹಸ್ತಾಂತರ ಮಾಡಿದರು.

ಸಾಮಾನ್ಯವಾಗಿ ಆಂಬ್ಯುಲೆನ್ಸ್ ಸೇವೆಗೆ ಶಿವಮೊಗ್ಗ ನಗರದ 10 ಕಿಲೋ ಮೀಟರ್ ಒಳಗೆ 1,500 ಚಾರ್ಜ್ ಮಾಡಲಾಗುತ್ತದೆ. ಆದರೆ ಸರ್ಜಿ ಫೌಂಡೇಶನ್ ಆಂಬ್ಯುಲೆನ್ಸ್ 500 ರೂ.ಗೆ , 20ರಿಂದ 30 ಕಿಲೋಮೀಟರ್ ಗೆ 2,200 ಇದ್ದರೆ 750ಕ್ಕೆ, ಬೆಂಗಳೂರಿಗೆ ಹೋಗಲು 10,500 ಇದ್ದಾರೆ ನಾವು 7,500 ರೂ ಗೆ ಸೇವೆಯನ್ನು ಒದಗಿಸುತ್ತೇವೆ, ಈ ಆಂಬ್ಯುಲೆನ್ಸ್‌ನಿಂದ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗುವಂತಾಗಿ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.

ಇಲ್ಲಿಯವರೆಗೂ ರೌಂಡ್ ಟೇಬಲ್ ಇಂಡಿಯಾ ದೇಶದಲ್ಲಿ ಎಲ್ಲ ಚಾಪ್ಟರ್ ಗಳು ಈ ಕೆಲಸ ಮಾಡುತ್ತಿದ್ದು ನಾವು ಕೂಡ ಶಿವಮೊಗ್ಗ ಚಾಪ್ಟರ್ ವತಿಯಿಂದ ಮಾಡುತ್ತಿದ್ದೇವೆ. ದೇಶದಾದ್ಯಂತ ದಿನಕ್ಕೆ 2 ಕ್ಲಾಸ್ ರೂಮ್ ಗಳನ್ನೂ ರೌಂಡ್ ಟೇಬಲ್ ನಿರ್ಮಿಸುತ್ತಿದೆ. ಇಲ್ಲಿಯವರೆಗೂ 10,040 ಕ್ಲಾಸ್ ರೂಮ್ ಗಳನ್ನೂ ದೇಶದಲ್ಲಿ ನಿರ್ಮಿಸಲಾಗಿದೆ. ಈಗಾಗಲೇ 3,960 ಪ್ರಾಜೆಕ್ಟ್ ಸಂಪೂರ್ಣವಾಗಿದೆ. ಇದರಂತೆ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post