No Result
View All Result
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ
English Articles

South Western Railway | Praveen Takes Charge as Hubballi Divisional Public Relations Officer

by ಕಲ್ಪ ನ್ಯೂಸ್
March 28, 2026
0

Kalpa Media House  |  Hubballi | S.P. Praveen, an officer of the Indian Railway Service of Signal Engineers (IRSSE), 2015...

Read moreDetails
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
Yogada Satsang Society brings out Kannada version on Kriya Yoga today

Yogada Satsang Society brings out Kannada version on Kriya Yoga today

March 25, 2026
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
  • Advertise With Us
  • Grievances
  • About Us
  • Contact Us
Sunday, March 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಭಾವೊದ್ವೇಗ ಬೇಡ, ಶಾಂತಿ ಕಾಪಾಡಿ, ಪೊಲೀಸರೊಂದಿಗೆ ಸಹಕರಿಸಿ: ಇದು ಕಲ್ಪ ಮೀಡಿಯಾ ಹೌಸ್ ಕಳಕಳಿ

ಹರ್ಷನ ಸಾವಿಗೆ ನ್ಯಾಯ ದೊರೆಯುತ್ತದೆ: ಸರ್ಕಾರ, ಪೊಲೀಸರಲ್ಲಿ ನಂಬಿಕೆಯಿಡಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 21, 2022
in ಶಿವಮೊಗ್ಗ
0
ಭಾವೊದ್ವೇಗ ಬೇಡ, ಶಾಂತಿ ಕಾಪಾಡಿ, ಪೊಲೀಸರೊಂದಿಗೆ ಸಹಕರಿಸಿ: ಇದು ಕಲ್ಪ ಮೀಡಿಯಾ ಹೌಸ್ ಕಳಕಳಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಬಜರಂಗದಳದ ಕಾರ್ಯಕರ್ತ ಹರ್ಷನ ಭೀಕರ ಹತ್ಯೆ #Bajarangadala activist harsha murder ಇಡಿಯ ಹಿಂದೂ ಸಮಾಜಕ್ಕೆ ನೋವು ಉಂಟು ಮಾಡಿದ್ದು, ಘಟನೆ ಪರಿಣಾಮ ಶಿವಮೊಗ್ಗದಲ್ಲಿ ಇಂದು ಅಹಿತಕರ ಘಟನೆ ನಡೆದಿದೆ.

ನಿನ್ನೆ ರಾತ್ರಿ ಹಳೇ ಶಿವಮೊಗ್ಗ ಭಾಗದ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಆದರೆ, ಇಂದು ಮುಂಜಾನೆ ಹರ್ಷನ ಪಾರ್ಥಿವ ಶರೀರದ ಮೆರವಣಿಗೆ ವೇಳೆ ತೀರ್ಥಹಳ್ಳಿ ರಸ್ತೆಯಲ್ಲಿ ಕಲ್ಲು ತೂರಾಟ ನಡೆಯಿತು.  ನಂತರ ಆತನ ನಿವಾಸದಿಂದ ಹೊರಟ ಅಂತಿಮ ಮೆರವಣಿಗೆ ಸಿದ್ದಯ್ಯ ರಸ್ತೆ ತಲುಪುತ್ತಿದ್ದಂತಯೇ ಮತ್ತೆ ಏಕಾಏಕಿ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಈ ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಟಿಯರ್ ಗ್ಯಾಸ್ ಸಹ ಸಿಡಿಸಿದ್ದರು. ಆದರೆ, ಇದು ಯಾವುದಕ್ಕೂ ಕಿಡಿಗೇಡಿಗಳು ಲೆಕ್ಕಿಸದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದು ಓರ್ವನ ತೊಡೆಗೆ ಹೊಕ್ಕಿದೆ. ಸದ್ಯ ಪರಿಸ್ಥಿತಿ ಮಿತಿ ಮೀರುವ ಹಂತ ತಲುಪಿದೆ.

Also read: ಶಿವಮೊಗ್ಗದಲ್ಲಿ ಕೈಮೀರುತ್ತಿರುವ ಪರಿಸ್ಥಿತಿ ನಿಯಂತ್ರಣಕ್ಕೆ ಗಾಳಿಯಲ್ಲಿ ಗುಂಡು

ಅತ್ಯಂತ ಪ್ರಮುಖವಾಗಿ ಭಾವೋದ್ವೇಗಕ್ಕೆ ಒಳಗಾಗಿರುವ ಎರಡೂ ಕಡೆಯ ಗುಂಪುಗಳ ಉದ್ರಿಕ್ತರು ಕಲ್ಲು ತೂರಾಟ, ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿರುವುದು ನಿಜಕ್ಕೂ ಖಂಡನೀಯ ವಿಚಾರ.

ಹರ್ಷನ ಹತ್ಯೆಯಾಗಿರುವುದು ಇಡಿಯ ಹಿಂದೂ ಸಮಾಜಕ್ಕೆ ನೋವಿನ ಸಂಗತಿ ಎಂಬುದು ಸತ್ಯ. ಆದರೆ, ಇದರ ಹಿನ್ನೆಲೆಯಲ್ಲಿ ಗಲಭೆ ಸೃಷ್ಠಿಸಿ, ಸಾರ್ವಜನಿಕರಿಗೆ ತೊಂದರೆ ನೀಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ.
ನಮ್ಮ ಸಮಾಜದಲ್ಲಿ ಸಾಂವಿಧಾನಿಕವಾಗಿ ಒಂದು ಸರ್ಕಾರವಿದೆ, ನ್ಯಾಯಾಂಗ ವ್ಯವಸ್ಥೆಯಿದೆ, ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿದೆ. ಹರ್ಷನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಲ್ಲಿ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆದಿದೆ. ಎಲ್ಲರನ್ನೂ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತಾರೆ. ಇದಕ್ಕೆ ಕೊಂಚ ಸಮಯ ಹಿಡಿಯುತ್ತದೆ. ದಯಮಾಡಿ ಕಾನೂನಿನಲ್ಲಿ ನಂಬಿಕೆಯಿಡಿ.

Also read: ಸಿದ್ಧಯ್ಯ ರಸ್ತೆಯಲ್ಲಿ ಮೆರವಣಿಗೆ ವೇಳೆ ಮತ್ತೆ ಕಲ್ಲು ತೂರಾಟ: ಪರಿಸ್ಥಿತಿ ನಿಯಂತ್ರಣಕ್ಕೆ ಟಿಯರ್ ಗ್ಯಾಸ್ ಬಳಕೆ

ಶಿವಮೊಗ್ಗ ನಮ್ಮ ಅಮೂಲ್ಯ ಆಸ್ತಿ. ನೀವುಗಳು ಬೆಂಕಿ ಹಚ್ಚುವುದು, ಕಲ್ಲು ತೂರುವುದು ಮಾಡುವುದರಿಂದ ನಮ್ಮ ಆಸ್ತಿಯನ್ನು ನಾವೇ ಹಾಳು ಮಾಡಿಕೊಂಡಂತೆ ಆಗುತ್ತದೆ. ಎಲ್ಲಕ್ಕೂ ಮಿಗಿಲಾಗಿ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ರಿಯೆ ನೀಡುವುದು ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಬೇಡಿ.

ಯಾರೋ ಹಿಂದೆ ನಿಂತು ಪ್ರಚೋದಿಸುತ್ತಾರೆ ಎಂದು ಸಾಮಾನ್ಯ ಕಾರ್ಯಕರ್ತರು, ಜನರು ಅಹಿತಕರ ಘಟನೆಯಲ್ಲಿ ತೊಡಗುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು, ಬೇರೇನೂ ಸಾಧನೆಯಾಗುವುದಿಲ್ಲ. ನೀವುಗಳು ಇಂತಹ ಗಲಭೆ ಸೃಷ್ಠಿಸುವುದರಿಂದ ಹರ್ಷ ವಾಪಾಸ್ಸು ಬರುವುದಿಲ್ಲ ಹಾಗೂ ಆರೋಪಿಗಳಿಗೆ ಶಿಕ್ಷೆಯೂ ಆಗುವುದಿಲ್ಲ. ಬದಲಾಗಿ, ತಾಳ್ಮೆ ಹಾಗೂ ಶಾಂತಿಯುತವಾಗಿ ವರ್ತಿಸಿ ಪೊಲೀಸರೊಂದಿಗೆ ಸಹಕಾರ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಿ.

ನೆನಪಿಡಿ… ನೀವುಗಳು ಇದೇ ರೀತಿ ಅಹಿತಕರ ಘಟನೆಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದರೆ, ಇದರ ನಿಯಂತ್ರಣಕ್ಕೆ ಈಗಾಗಲೇ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನೀವುಗಳು ಶಾಂತಿ ಕಾಪಾಡದೇ ಇದ್ದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಗೆ ಮುಂದಿನ ಕ್ರಮಗಳು ಅನಿವಾರ್ಯವಾಗುತ್ತವೆ. ದಯಮಾಡಿ ಪೊಲೀಸರಿಗೆ ಅಂತಹ ಮುಂದಿನ ಕ್ರಮದವರೆಗೂ ಅವಕಾಶ ನೀಡಬೇಡಿ. ಅದರಿಂದ ತೊಂದರೆಯಾಗುವುದು ಸಾರ್ವಜನಿಕರಿಗೆ ಎಂಬುದು ನೆನಪಿನಲ್ಲಿರಲಿ.

ಅಂತಿಮವಾಗಿ ಇಂತಹ ಅಹಿತಕರ ಘಟನೆಗಳಿಂದ ತೊಂದರೆ ಅನುಭವಿಸುವುದು ಜನ ಸಾಮಾನ್ಯರು, ವ್ಯಾಪಾರಸ್ತರು, ಬೀದಿ ಬದಿ ವ್ಯಾಪಾರಸ್ತರು ಹಾಗೂ ಅಂದಿನ ಅನ್ನವನ್ನು ಅಂದೇ ದುಡಿದು ತಿನ್ನುವ ಅಸಹಾಯಕರು ಎಂಬುದನ್ನು ಮರೆಯಬೇಡಿ.

Also read: ನಿಮಗಿಂತ ಜಾಸ್ತಿ ನನಗೆ ಸಿಟ್ಟಿದೆ, ನೀವು ಹೇಳಿದಂತೆ ಎನ್’ಕೌಂಟರ್ ಮಾಡೋಕಾಗಲ್ಲ: ಈಶ್ವರಪ್ಪ ಖಡಕ್ ಮಾತು

ಅಲ್ಲದೇ, ಊಹಾಪೋಹಗಳು, ಪೂರ್ವಗ್ರಹ ಪೀಡಿತ ಪೋಸ್ಟ್ ಹಾಗೂ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಹಾಗೂ ಶೇರ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ…

ದಯಮಾಡಿ ಶಾಂತಿ ಕಾಪಾಡಿ, ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದಿಗೆ ಸಹಕಾರ ನೀಡಿ. ಆ ಮೂಲಕ ನಗರದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬುದು ಕಲ್ಪ ಮೀಡಿಯಾ ಹೌಸ್ #Kalpa media house ಮನವಿ ಹಾಗೂ ಕಳಕಳಿ….

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: #NewsKannada #KannadaNewsOnline #KannadaNewsKannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Previous Post

BREAKING | ಶಿವಮೊಗ್ಗದಲ್ಲಿ ಕೈಮೀರುತ್ತಿರುವ ಪರಿಸ್ಥಿತಿ ನಿಯಂತ್ರಣಕ್ಕೆ ಗಾಳಿಯಲ್ಲಿ ಗುಂಡು

Next Post

ಹಿಂದೂ ಕಾರ್ಯಕರ್ತನನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ರಾಮ್ ಸೇನೆ ಆಗ್ರಹ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಹಿಂದೂ ಕಾರ್ಯಕರ್ತನನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ರಾಮ್ ಸೇನೆ ಆಗ್ರಹ

ಹಿಂದೂ ಕಾರ್ಯಕರ್ತನನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ರಾಮ್ ಸೇನೆ ಆಗ್ರಹ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ನೈರುತ್ಯ ರೈಲ್ವೆ ದಿವ್ಯಾಂಗಜನ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಿರಣ್ ಬಿ. ಚಿನ್ನಾರಾಥೋಡ್ ಮರು ಆಯ್ಕೆ

ನೈರುತ್ಯ ರೈಲ್ವೆ ದಿವ್ಯಾಂಗಜನ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಿರಣ್ ಬಿ. ಚಿನ್ನಾರಾಥೋಡ್ ಮರು ಆಯ್ಕೆ

March 29, 2026
ಶಿರಸಿ | ಪ್ರವಾಸಿಗರಿಗೆ ಸೇವೆ ನೀಡಲು ‘ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ’ ಸಜ್ಜು

ಶಿರಸಿ | ಪ್ರವಾಸಿಗರಿಗೆ ಸೇವೆ ನೀಡಲು ‘ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ’ ಸಜ್ಜು

March 29, 2026
ಶಿವಮೊಗ್ಗ | ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಉಪನ್ಯಾಸಕ | ಎಸ್’ಪಿ ನಿಖಿಲ್ ಹೇಳಿದ್ದೇನು?

ಶಿವಮೊಗ್ಗ | ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಉಪನ್ಯಾಸಕ | ಎಸ್’ಪಿ ನಿಖಿಲ್ ಹೇಳಿದ್ದೇನು?

March 29, 2026
ಲೋಕಕಲ್ಯಾಣರ್ಥ ಮಾ.30ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಎಲ್ಲಾ ರೋಗಗಳಿಗೆ ಮಹಾ ಔಷಧ | ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

March 29, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL