ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರೀ ಮಳೆಯಿಂದಾಗಿ ನಗರದ ಶೇಷಾದ್ರಿಪುರಂನಲ್ಲಿ ಕುಸಿತಗೊಂಡ ಮನೆಗಳಿಗೆ ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ K E Kantesh ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ಥರಿಗೆ ಧೈರ್ಯ ತುಂಬಿದರು.
ಕುಸಿತಗೊಂಡ ಮನೆಗಳಿಗೆ ಇಂದು ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಏನೆಲ್ಲಾ ಹಾನಿಯಾಗಿದೆ ಎಂದು ಮಾಹಿತಿ ಪಡೆದುಕೊಂಡರು.
ಮನೆ ಕುಸಿತಗೊಂಡು ಸಂತ್ರಸ್ಥರಾಗಿರುವ ಮಹಿಳೆಯ ಜೊತೆಯಲ್ಲಿ ಮಾತನಾಡಿದ ಅವರು, ಅಳಬೇಡಿ ತಾಯಿ, ನಿಮ್ಮೊಂದಿಗೆ ನಾವಿದ್ದೇವೆ. ನಾಳೆ ತಂದೆಯವರು ಭೇಟಿ ನೀಡುತ್ತಾರೆ. ಕಮಿಷನರ್ ಹಾಗೂ ತಹಶೀಲ್ದಾರ್ ಅವರೊಂದಿಗೆ ಮಾತನಾಡಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದರು.
Also read: ಹಾಸನದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ನರಳಾಡಿ ಪ್ರಾಣ ಬಿಟ್ಟ ಸವಾರ
ಕುಸಿದಿರುವ ನಾಲ್ಕು ಮನೆಯನ್ನು ವೀಕ್ಷಿಸಿ, ಇನ್ನೊಂದು ಮನೆ ಕುಸಿಯುವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಪಡೆದುಕೊಂಡರು.
ತತಕ್ಷಣವೇ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಮಾತನಾಡಿದ ಕಾಂತೇಶ್, ನಾಲ್ಕು ಮನೆಗಳು ಈಗಾಗಲೇ ಕುಸಿದಿವೆ. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post