ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿನೋಬ ನಗರ ಶುಭ ಮಂಗಳ ಸಮುದಾಯ ಭವನದ ಪಕ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಜಿ ಫೌಂಡೇಶನ್, ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಮಲೆನಾಡು ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಉಚಿತ ಆರೋಗ್ಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯತಪಾಸಣೆ ಟೈಫಾಯಿಡ್ ಲಸಿಕೆ ನೀಡಿ, ಮಕ್ಕಳಿಗೆ ವಾಟರ್ ಬಾಟಲ್ ವಿತರಿಸಲಾಯಿತು.
ಆರೋಗ್ಯ ತಪಾಸಣಾ ಶಿಬಿರಕ್ಕೆ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ Dr. Dananjaya Sarji ಅವರು ಮಕ್ಕಳಿಗೆ ತಪಾಸಣೆ ನಡೆಸುವ ಮೂಲಕ ಚಾಲನೆ ನೀಡಿದರು.

Also read: ಆಸ್ಪತ್ರೆಗೆ ದಾಖಲು ವದಂತಿ: ಶೂಟಿಂಗ್ ಸ್ಥಳದಿಂದ ಸ್ವತಃ ಲೈವ್‌ಗೆ ಬಂದ ಉಪೇಂದ್ರ ಹೇಳಿದ್ದೇನು?
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಾಲು, ಮಲೆನಾಡು ಹಳೆ ವಿದ್ಯಾರ್ಥಿಗಳ ಯುವಕರ ಸಂಘದ ಜಗದೀಶ್, ಪ್ರಶಾಂತ್, ರಮೇಶ್ ಮತ್ತಿತರರು ಹಾಜರಿದ್ದರು. ಡಾ.ಅಪರ್ಣಾ, ಡಾ.ರಶ್ಮಿ ಮತ್ತು ಸಿಬ್ಬಂದಿ ಹಾಜರಿದ್ದರು.












Discussion about this post