ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿಯ, ಕಮಲಾ ನೆಹರೂ ಮಹಿಳಾ ಕಾಲೇಜಿನ ನೂತನ ಪ್ರಾಚಾರ್ಯರಾಗಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ಎಚ್. ಎಸ್. ನಾಗಭೂಷಣರವರನ್ನು ನೇಮಕ ಮಾಡಲಾಗಿದೆ.
ಕಳೆದ 35 ವರ್ಷಗಳ ಸುದೀರ್ಘ ಸೇವೆಯಲ್ಲಿರುವ ಡಾ. ನಾಗಭೂಷಣರವರು, ಇಂಗ್ಲೀಷ್ ಉಪನ್ಯಾಸಕರಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಅಽಕಾರಿಯಾಗಿ, ಪ್ರಾಧ್ಯಾಪಕರಾಗಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಅನುಭವಗಳಿಸಿದವರು.
ರಾಷ್ಟ್ರೀಯ, ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಗಮನ ಸೆಳೆದಿರುವ ಇವರು, ಅನೇಕ ವಿಚಾರ ಸಂಕಿರಣಗಳ ಅಧ್ಯಕ್ಷತೆ ವಹಿಸಿ ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ.

ಸುದೀರ್ಘಕಾಲ ನಗರದ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿಯಾಗಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಕಾರಣರಾಗಿರುವ ಇವರು, ಶಿವಮೊಗ್ಗ ಬೆಳ್ಳಿಮಂಡಲದ ಕಾರ್ಯದರ್ಶಿಯಾಗಿಯೂ ಸಹ ಕಾರ್ಯನಿರ್ವಹಿಸಿ, ಸಿನಿಮಾ ಕುರಿತಾದ ವಿಚಾರ ಸಂಕಿರಣಗಳನ್ನು ಸಂಘಟಿಸಿದ್ದಾರೆ. ಚಾರಣಿಗರೂ ಆಗಿರುವ ಇವರು, ಹಿಮಾಲಯ ಚಾರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ರಂಗ ನಟರೂ ಆಗಿರುವ ಡಾ. ನಾಗಭೂಷಣ, ಶಿವಮೊಗ್ಗೆಯ ಅನೇಕ ತಂಡಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿ ಗಮನ ಸೆಳೆದಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಯ ಅಽಕಾರಿಯಾಗಿ ರಾಜ್ಯ ಪ್ರಶಸ್ತಿಗೆ ಭಾಜರಾಗಿರುವ ಇವರು, ರಂಗಭೂಮಿಯಲ್ಲಿ ಶ್ರೇಷ್ಟ ನಟ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ಅಭಿನಂದನೆ:
ಕಮಲಾ ನೆಹರೂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡಿರುವ ಡಾ. ಎಚ್. ಎಸ್. ನಾಗಭೂಷಣರವರನ್ನು ಶಿವಮೊಗ್ಗ ಬೆಳ್ಳಿಮಂಡಲದ ಕಾರ್ಯಾಧ್ಯಕ್ಷ ಡಿ.ಎಸ್. ಅರುಣ್, ಜಿಲ್ಲಾ ಸಂಚಾಲಕ ವೈದ್ಯ ಅಭಿನಂದಿಸಿ ಶುಭಕೋರಿದ್ದಾರೆ.









Discussion about this post