ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಮೂರನೇ ವಾರ್ಡಿನ ನಾಗರತ್ನಮ್ಮ ಬಡಾವಣೆಯಲ್ಲಿ 34 ಲಕ್ಷ ರೂ.ಗಳ ಯುಜಿಡಿ ಕಾಮಗಾರಿಗೆ ಮಹಾನಗರ ಪಾಲಿಕೆ ವತಿಯಿಂದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಉಪಮಹಾಪೌರ ಶಂಕರ್ ಗನ್ನಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯೀ ಸಮಿತಿಯ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಶಕ್ತಿ ಕೇಂದ್ರದ ಅಧ್ಯಕ್ಷ ಗಾರೆ ನಾಗಣ್ಣ, ವಾರ್ಡ್ ಅಧ್ಯಕ್ಷ ನಾಗರಾಜ್, ಶಾಂತಿನಗರ ನಿವಾಸಿ ಸಂಘದ ಅಧ್ಯಕ್ಷ ಜಯದೇವಪ್ಪ, ಭೂತ್ ಪ್ರಧಾನ ಕಾರ್ಯದರ್ಶಿ ಪ್ರಸಾದ್, ಪ್ರಮುಖರಾದ ನಾಗರತ್ನಮ್ಮ, ಪುಷ್ಪಾವತಿ, ಮಮತಾ, ಕೃಷ್ಣಮೂರ್ತಿ, ನಾಗರತ್ನಮ್ಮ ಬಡಾವಣೆಯ ಎಲ್ಲಾ ಮುಖಂಡರು, ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಂತಿನಗರ ಹಾಗು ನಾಗರತ್ನಮ್ಮ ಬಡಾವಣೆಯ ನಿವಾಸಿಗಳು ತಮ್ಮ ಬಡಾವಣೆಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮಹಾಪೌರರಲ್ಲಿ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post