ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶನೇಶ್ವರ ದೇವಾಲಯ ಟ್ರಸ್ಟ್ ಹಾಗೂ ನಾಟ್ಯಶ್ರೀ ಕಲಾ ತಂಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಮರಿಸಯ್ಯ ಶ್ರೀ ರಾಮ ಮಂತ್ರವ… ಶ್ರೀ ರಾಮ ಕಥಾ ಸಪ್ತಾಹ ಕಾರ್ಯಕ್ರಮಕ್ಕೆ ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಏ.16ರ ನಾಳೆ ಚಾಲನೆ ನೀಡಲಾಗುವುದು ಎಂದು ಶ್ರೀಗಂಧ ಸಂಸ್ಥೆಯ ಸಂಚಾಲಕ ಬಿ.ಆರ್. ಮಧುಸೂದನ್ ಹೇಳಿದ್ದಾರೆ.
ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅವಧೂತ ವಿನಯ್ ಗುರೂಜಿ ಗೌರಿಗದ್ದೆ ಇವರ ಸಾನಿಧ್ಯವಿದ್ದು, ಸಂಸ್ಥೆಯ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ನಾಳೆ ಬೆಳಗ್ಗೆ 7:30ರಿಂದ ಪೂಜೆ-ಹೋಮಗಳಿಂದ ಸಮಾರಂಭ ಆರಂಭವಾಗಲಿದ್ದು, ಬೆಳಿಗ್ಗೆ 10ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ನಂತರ ಶನೇಶ್ವರ ದೇವಾಲಯದ ಒಳಭಾಗದಲ್ಲಿ ರಾಮಾಯಣ ಮತ್ತು ಲಕ್ಷ್ಮಿ ಹೃದಯ ಪಾರಾಯಣಗಳು ನಡೆಯಲಿದೆ. ಸಂಜೆ 5ರಿಂದ 6ಗಂಟೆಯವರೆಗೆ ನಗರದ ವಿವಿಧ ಭಜನಾ ತಂಡಗಳಿಂದ ಪ್ರತಿ ನಿತ್ಯ ಮೂರ್ನಾಲ್ಕು ಭಜನಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮ:
ಸಂಜೆ 6ಗಂಟೆಗೆ ಸಭಾಕಾರ್ಯಕ್ರಮ ಆರಂಭವಾಗಲಿದೆ. ನಂತರದಲ್ಲಿ ರಾತ್ರಿ 7 ಗಂಟೆಯಿಂದ 9:30ರ ವರೆಗೆ ನಾಟ್ಯ ಶ್ರೀ ಕಲಾ ತಂಡ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post