ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗೆಯ ಪ್ರತಿಷ್ಟಿತ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಚುನಾವಣೆಯಲ್ಲಿ ಎನ್. ಗೋಪಿನಾಥ್ ನೇತೃತ್ವದ ತಂಡ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದೆ. ತಂಡದ 9 ಮಂದಿ ಚುನಾಯಿತರಾಗಿದ್ದು, ಪರಿವರ್ತನ ತಂಡದ ನಾಲ್ವರು ಹಾಗೂ ಈರ್ವರು ಸ್ವತಂತ್ರವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 746 ಮಂದಿ ಸದಸ್ಯರ ಪೈಕಿ 596 ಮಂದಿ ಮತ ಚಲಾಯಿಸಿದ್ದರು. ಕಳೆದ 9ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ರೀತಿಯ ಚುನಾವಣೆ ನಡೆದಿದ್ದು, ಶೇ. 80ರಷ್ಟು ಮತದಾನವಾಗಿದೆ.
ಎನ್. ಗೋಪಿನಾಥ್ (428), ಎಸ್. ಎಸ್. ಉದಯ ಕುಮಾರ್ (405), ಬಿ. ಗೋಪಿನಾಥ್ (382), ಪ್ರದೀಪ್ ವಿ. ಎಲಿ (356), ಪರಮೇಶ್ವರ್ ಈ. (353), ರಾಜು ಎಂ. (349), ಜಿ. ವಿಜಯಕುಮಾರ್ (340), ಜಗದೀಶ್ ಮಾತಣ್ಣನವರ್ (322), ವಸಂತ ಹೋಬಳಿದಾರ್ (308), ಬಿ. ಆರ್. ಸಂತೋಷ್ (307), ಮಧುಸೂದನ ಐತಾಳ್ (306), ಕೆ. ಎಸ್. ಸುಕುಮಾರ್ (264), ಗಣೇಶ್ ಎಂ. ಅಂಗಡಿ (263), ಮಂಜೇಗೌಡ (256), ಮರಿಸ್ವಾಮಿ (251) ಚುನಾಯಿತರಾಗಿದ್ದಾರೆ.
ಪರಾಜಿತಗೊಂಡವರಲ್ಲಿ ಎಸ್. ವಿ. ದೀಪಕ್ (239), ಜಿ. ಎನ್. ಪ್ರಕಾಶ್ (238), ಎ. ಎಂ. ಸುರೇಶ್ (233), ಎಂ. ಜಗನ್ನಾಥ್ (222), ಡಿ. ಪಿ. ಸಂದೀಪ್ (210, ಎಂ. ಎಂ. ಗೋಪಿ (197), ಎಸ್. ವಿಶ್ವೇಶ್ವರಯ್ಯ (189), ಕೆ. ಜಿ. ನಾಗೇಶ್ ರಾವ್ (188), ದೇವರ್ ಚಂದ್ ವಿ. (185), ಕೆ. ಜಿ. ವಿನೋದ್ (182), ಸೆಂಥಿಲ್ ವೇಲನ್ (177), ಯು. ಎಂ. ಶಿವರಾಜ್ (151), ಎ. ಎನ್. ಪ್ರಕಾಶ್ (141) ಮತ ಪಡೆದಿದ್ದರು.
ಈ ಬಾರಿ ಸ್ಪರ್ಧಾಕಣದಲ್ಲಿ ೨೮ ಮಂದಿ ಇದ್ದರು. ಈ ಪೈ ಹಾಲಿ ಎಂಟು ಮಂದಿ ನಿರ್ದೇಶಕರು ಕೂಡಾ ಕಣದಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post