ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯಗೊಳಿಸಿ, ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅಭಿಪ್ರಾಯಪಟ್ಟರು.
ನಗರದ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ವತಿಯಿಂದ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಚಂದನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕ್ರಿಮಿನಲ್ ಅಪರಾಧ ಪ್ರಕರಣಗಳ ಹೊಸ ಪ್ರಮುಖ ಕಾಯ್ದೆಗಳು : ಬದಲಾವಣೆಗಳು’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Also read: ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್
ಈ ಕಾಯ್ದೆಯ ಮೂಲಕ ಪೊಲೀಸರ ತನಿಖೆಯ ಕ್ರಮಾವಳಿ, ಪ್ರಥಮ ತನಿಖಾ ವರದಿ, ಸಾಕ್ಷಾಧಾರಗಳ ಸಂಗ್ರಹ, ಪ್ರಕರಣಗಳ ಶೀಘ್ರ ಇತ್ಯರ್ಥ ಸೇರಿದಂತೆ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳನ್ನು ಆಧುನಿಕ ಯುಗಕ್ಕೆ ತಕ್ಕಂತೆ ನಾವೀನ್ಯತೆಯೊಂದಿಗೆ ರೂಪಗೊಳಿಸಲಾಗಿದೆ. ಇಲ್ಲಿಯವರೆಗೆ ಕೆಲಸ ಮಾಡುತ್ತಿದ್ದ ವಕೀಲರು, ಪೋಲಿಸರು, ಸಾರ್ವಜನಿಕರು ಹೊಸತನಕ್ಕೆ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬ ಕುತೂಹಲವಿದೆ ಎಂದು ಹೇಳಿದರು.

ಶಿಕ್ಷೆಯಿಂದ ವ್ಯಕ್ತಿಯನ್ನು ಬದಲಾಯಿಸುವುದಕ್ಕಿಂತ ಉತ್ತಮ ಚಿಂತನೆಗಳಿಂದ ವ್ಯಕ್ತಿತ್ವ ಬದಲಾಯಿಸುವ ಮುಖ್ಯ ಉದ್ದೇಶ ಹೊಸ ಕಾಯ್ದೆಗಿದೆ. ಈ ಮೂಲಕ ಪ್ರತಿಯೊಬ್ಬ ನಾಗರೀಕರಿಗೆ ನ್ಯಾಯದ ಸ್ಪರ್ಶ ನೀಡುವಲ್ಲಿ ನ್ಯಾಯ ಸಂಹಿತೆ ಕಾಯ್ದೆಯಿಂದ ಸಾಧ್ಯವಾಗಲಿದೆ. ಭಾರತದಿಂದ ಹೊರಗಿದ್ದು, ದೇಶದ ಒಳಗಿನ ಅಪರಾಧ ಪ್ರಕರಣಗಳಿಗೆ ಭಾಗಿಯಾಗುವ ಅಪರಾಧಿಗಳನ್ನು ಭಾರತೀಯ ಕಾನೂನು ವ್ಯಾಪ್ತಿಗೆ ತರುವಂತಹ ಬಲಿಷ್ಟ ಕಾಯ್ದೆ ಇದಾಗಿದೆ. ನ್ಯಾಯ ಸಂಹಿತೆ ಕಾಯ್ದೆಯಲ್ಲಿ 511 ಸೆಕ್ಷನ್ ಗಳಿಂದ 358 ಸೆಕ್ಷನ್ ಗೆ ಇಳಿಸಲಾಗಿದೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post