ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾನುವಾರ ರಾತ್ರಿ ಕೊಲೆಯಾದ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ #Bhajarangadala activist harsha murder ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.ಹತ್ಯೆಗೆ ಸಂಬಂಧಿಸಿದಂತೆ ಆತನ ಸ್ನೇಹಿತ ಹಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ.

ಕೊಲೆಯಾಗುವುದಕ್ಕೂ ಮೊದಲೂ ಪದೇ ಪದೇ ಕರೆ ಮಾಡುತ್ತಿದ್ದ ಇಬ್ಬರು ಹುಡುಗಿಯರು ನಾನು ನಿಮ್ಮ ಸ್ನೇಹಿತರು ಎನ್ನುತ್ತಿದ್ದರು. ಈ ವೇಳೆ ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದಾನೆ. ಇವರು ಯಾರು ಎಂದು ಸ್ನೇಹಿತರಿಗೆ ಕೇಳಿದ್ದಾನೆ. ಇದಾದ ಬಳಿಕ ಸ್ನೇಹಿತರ ಜೊತೆ ತೆರಳಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದು ಹೋಗಿತ್ತು” ಎಂದು ಸ್ನೇಹಿತ ಹೇಳಿಕೊಂಡಿದ್ದಾನೆ.
ಕೊಲೆಯ ಬಳಿಕ ಹರ್ಷನ ಮೊಬೈಲ್ ನಾಪತ್ತೆಗಿದೆ. ಮೊಬೈಲ್ ಎಲ್ಲಿದೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಮೊಬೈಲ್ ಆರೋಪಿಗಳ ಬಳಿ ಇದೆಯೇ? ಆರೋಪಿಗಳು ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ? ಸಹಾಯ ಕೇಳುವ ನೆಪದಲ್ಲಿ ಹುಡುಗಿಯರಿಂದ ಕರೆ ಮಾಡಿಸಿ ಬಲೆ ಬೀಸಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಜನರಿಗೆ ಮೂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post