No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
0

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Wednesday, June 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಡಾ. ಸುರೇಶ್ ಸಲಹೆ

ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಾ ದಿನಾಚರಣೆ ಆಯೋಜನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 16, 2022
in ಶಿವಮೊಗ್ಗ
0
ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಡಾ. ಸುರೇಶ್ ಸಲಹೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಪ್ರಾರಂಭಿಕ ಹಂತದ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಬರುವ ಸವಾಲುಗಳನ್ನು ಎದುರಿಸಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಪಿ ಸುರೇಶ್ ತಿಳಿಸಿದರು.

ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತರ್ ರಾಷ್ಟ್ರೀಯ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಕೌಶಲ್ಯಗಳನ್ನು ರೂಡಿಸಿಕೊಳ್ಳುವ ಅನಿವಾರ್ಯತೆ ಇದೆ. ಹಿರಿಯ ಶಸ್ತ್ರಚಿಕಿತ್ಸಾ ತಜ್ಞರ ವಾಡಿಕೆಯ ಪ್ರಕಾರ ವಯಸ್ಸು ನಲವತ್ತು ಆದ ನಂತರವೇ ಯಶಸ್ವಿ ಶಸ್ತ್ರಚಿಕಿತ್ಸಾ ತಜ್ಞರೆನಿಸಿಕೊಳ್ಳಲು ಸಾಧ್ಯ. ಪದವಿ ಪಡೆದವರೆಲ್ಲ ನುರಿತ ಶಸ್ತ್ರಚಿಕಿತ್ಸಾ ತಜ್ಞರಾಗುವುದಿಲ್ಲ. ಪ್ರಮುಖವಾಗಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಹಾಗೆ ಜ್ಞಾನ ಸಂಪಾದನೆ ಮಾತ್ರವಲ್ಲದೆ ಕೌಶಲ್ಯ ನಿಪುಣತೆಯ ಅಗತ್ಯವೂ ಇದೆ. ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಾ ವಿಭಾಗವು ದಂತ ವೈದ್ಯಕೀಯದಲ್ಲಿದ್ದರೂ ವೈದ್ಯಕೀಯ ವಿಭಾಗಗಳಾದ ಶಸ್ತ್ರಚಿಕಿತ್ಸಾ ವಿಭಾಗ, ನರರೋಗ ವಿಭಾಗ, ಕೀಲು-ಮೂಳೆ ವಿಭಾಗ, ಅರವಳಿಕೆ ವಿಭಾಗ ಹಾಗೂ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಾ ವಿಭಾಗಗಳಲ್ಲಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದರು.

ಅಪಘಾತ ಮತ್ತು ತುರ್ತು ಚಿಕಿತ್ಸಾ ನಿರ್ವಾಹಣೆಯಲ್ಲಿ ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಿಂದ ಸೌಲಭ್ಯವಿರುವ ನಗರ-ಪಟ್ಟಣಗಳ ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎಸ್. ಸುರೇಶ್ ಮಾತನಾಡಿ, ಮುಖದ ಅಂದವನ್ನು ಹೆಚ್ಚಿಸುವಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಬಹು ಮುಖ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ವಿಭಾಗದಲ್ಲಿ ಅತ್ಯಂತ ಮುಂದುವರೆದ ವೈದ್ಯಕೀಯ ಸಂಶೋಧನೆಗಳು ಸಫಲತೆಯನ್ನು ಪಡೆದಿದ್ದು, ಆಧುನಿಕ ಕಾಲಘಟ್ಟದಲ್ಲಿ ಪ್ರಮುಖ ವಿಭಾಗವಾಗಿ ಬೆಳೆದಿದೆ. ವೈದ್ಯರುಗಳಾದ ನಾವೆಲ್ಲರೂ ಸಾಮಾಜಿಕ ಹೊಣೆಗಾರಿಕೆ ಹಾಗೂ ಬದ್ಧತೆಯಿಂದ ಜನಸಾಮಾನ್ಯರಿಗೆ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ಬಾಯಿ ಮುಖ ಮತ್ತು ದವಡೆಗಳ ಆರೋಗ್ಯವನ್ನು ಸಂರಕ್ಷಿಸಿಕೊಳ್ಳುವ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿರುವವರು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿಯೇ ಸಾರ್ವಜನಿಕರಲ್ಲಿ ಅರಿವು ಉಂಟಾಗುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಅಪಘಾತ ಹಾಗೂ ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಪ್ರತಿ ಕ್ಷಣವು ಅಮೂಲ್ಯವಾದದ್ದು ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜ್ಞಾನ ಬೆಳೆಸಬೇಕಿದೆ. ಭಾರತದಂತಹ ದೇಶಗಳಲ್ಲಿ ಗ್ರಾಮೀಣ ಪ್ರದೇಶದ ಸಂಚಾರ ವ್ಯವಸ್ಥೆಯಲ್ಲಿ ಚಿಕಿತ್ಸೆಯು ಸಕಾಲಕ್ಕೆ ಸಿಗುವಂತೆ ಆಗಲು ನಾವೆಲ್ಲರೂ ಜವಬ್ದಾರರಾಗಬೇಕಿದೆ. ಆರೋಗ್ಯ ಕ್ಷೇತ್ರವೆಂದರೆ ಪ್ರಚಾರ ಮಾಡುವಂತಾಗಬಾರದು, ಅನಾರೋಗ್ಯದಿಂದ ಬಳಲದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರೋಗಗಳನ್ನು ತದೆಗಟ್ಟುವಂತ್ತಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗ ಮುಖ್ಯಸ್ಥರಾದ ಡಾ.ಪ್ರಮೋದ್ ಕೃಷ್ಣ ಬಿ ಅವರು, ಬಾಯಿ ಮುಖ ಮತ್ತು ದವಡೆ ವಿಭಾಗವು ದಂತ ವೈದ್ಯಕೀಯ ವಿಭಾಗದ ಒಂದು ಅವಿಭಾಜ್ಯ ಅಂಗ. ಸಾರ್ವಜನಿಕರಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಾ ವಿಭಾಗದ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಮುಖದ ವಿಕಲಾಂಗತೆ ನಿವಾರಣೆ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು 1969 ರಿಂದ ಪ್ರತಿ ವರ್ಷ ಫೆಬ್ರವರಿ 13ರಂದು ಬಾಯಿ ಮುಖ ಮತ್ತು ದವಡೆ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಗುವುದು.  2022ರ ಆಚರಣೆಯ ಧ್ಯೇಯವಾಕ್ಯ ಮುಖದ ಬದಲಾವಣೆ ಹಂತಗಳು ಹಾಗೂ ಕಪ್ಪು ಶಿಲೀಂದ್ರ ರೋಗವನ್ನು ಎದುರಿಸೋಣ, ಜೀವನ ದೃಷ್ಠಿಕೋನವನ್ನು ಬದಲಾಯಿಸೋಣ ಎಂಬುದಾಗಿದೆ. ಭಾರತ ದೇಶದಾದ್ಯಂತ ಸುಮಾರು 25 ಸಾವಿರದಷ್ಟು ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರೆಲ್ಲರೂ ಈ ದಿನವನ್ನು ಆಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನ್ಮಜಾತ ವಿಕಲಾಂಗತೆ, ಕೃತಕ ವಿಕಲಾಂಗತೆ, ದವಡೆ ಕೀಲು ಸೋಂಕು, ದವಡೆ ಮರುಜೋಡಣೆ, ಬಾಯಿ, ಮುಖ ಮತ್ತು ದವಡೆಗಳಲ್ಲಿ ಗಡ್ಡೆ ಹಾಗೂ ಕೋವಿಡ್-19 ರೋಗವಿರುವ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ರೋಗದಿಂದ ಮುಖದ ಮೇಲಿನ ದವಡೆ ಸಂಪೂರ್ಣವಾಗಿ ಕೊಳೆತು, ಮಾರಣಾಂತಿಕವಾಗಿ ಕಾಡಬಹುದಾದ ಸಂದರ್ಭದಲ್ಲಿ ಕೊಳೆತ ದವಡೆ ಭಾಗವನ್ನು ಸರ್ಜರಿ ಮುಖಾಂತರ ಕಿತ್ತು, ಮುಖದ ವಿಕಲಾಂಗತೆಯನ್ನು ತಡೆಯುವ ಕುರಿತು ನುರಿತ ತಜ್ಞ ವೈದ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ದಂತ ವೈದ್ಯರು ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga NewsSubbaiah Dental Collegeಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವನ್ಯಜೀವಿ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಚಟುವಟಿಕೆಗಳು ನಡೆಯಲಿ: ಪ್ರೊ. ಬಿ. ಪಿ. ವೀರಭದ್ರಪ್ಪ

Next Post

ನೊಂದ‌ ಶಿಕ್ಷಕಿಯ ಸಹಾಯಕ್ಕೆ ಮುಂದಾದ ಮಾಜಿ ಸಚಿವ ಸುರೇಶ್ ಕುಮಾರ್…

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮುಖ್ಯಮಂತ್ರಿಗಳೇ, ಚಾಮರಾಜನಗರವೂ ನಿಮ್ಮ ಆಡಳತದ ವ್ಯಾಪ್ತಿಯಲ್ಲಿದೆ ಎಂಬುದು ನೆನಪಿದೆಯೇ?

ನೊಂದ‌ ಶಿಕ್ಷಕಿಯ ಸಹಾಯಕ್ಕೆ ಮುಂದಾದ ಮಾಜಿ ಸಚಿವ ಸುರೇಶ್ ಕುಮಾರ್...

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Hubli to Rameshwaram Train

ಹುಬ್ಬಳ್ಳಿ-ರಾಮೇಶ್ವರಂ, ಬೆಂಗಳೂರು ಕಾನ್ಫುರ ಸೇರಿದಂತೆ ಹಲವು ರೈಲುಗಳ ಅಪ್ಡೇಟ್

June 24, 2026
Narayana Super Speciality Clinic Inaugurated Shivamogga by Actress Aditi Prabhudeva

ಈ ಕ್ಲಿನಿಕ್ ನಾರಾಯಣ ಹೆಲ್ತ್ ಮೇಲಿನ ಜನರ ನಂಬಿಕೆಯ ಪ್ರತೀಕ | ನಟಿ ಅದಿತಿ ಪ್ರಭುದೇವ

June 23, 2026
MP Raghavendra Seeks Governor’s Support for Shivamogga Circuit Bench

ರಾಜ್ಯಪಾಲರನ್ನು ಭೇಟಿಯಾಗಿ ಮಹತ್ವದ ಮನವಿ ಸಲ್ಲಿಸಿದ ಸಂಸದ ರಾಘವೇಂದ್ರ

June 23, 2026
ಫಾರ್ಮಸಿಸ್ಟ್‌ ವೃತ್ತಿ ಸಾಮಾಜಿಕ ಬದ್ಧತೆಯ ಜವಾಬ್ದಾರಿ: ಡಾ. ಖಾಲಿದ್ ಅಹಮದ್ ಖಾನ್

ಫಾರ್ಮಸಿಸ್ಟ್‌ ವೃತ್ತಿ ಸಾಮಾಜಿಕ ಬದ್ಧತೆಯ ಜವಾಬ್ದಾರಿ: ಡಾ. ಖಾಲಿದ್ ಅಹಮದ್ ಖಾನ್

June 23, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL