ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕಳೆದ ಜೂನ್ ನಾಲ್ಕರಂದು ಸಕ್ರೆಬೈಲು ಆನೆ ಬಿಡಾರದ ದಿನಗೂಲಿ ಸಿಬ್ಬಂದಿಗೆ ಪುಡ್ ಕಿಟ್ ಒದಗಿಸಿದ್ದ ವೈಲ್ಡ್ ಟಸ್ಕರ್ ಸಂಸ್ಥೆಯ ಗೌರವ ಟ್ರಸ್ಟಿ, ಜೆಡಿಎಸ್ನ ರಾಜ್ಯಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಇಂದು ಸಕ್ರೈಬೈಲ್ನ ಆನೆ ಬಿಡಾರದ ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ವಿತರಿಸಿದರು.
ಎರಡು ದಿನಗಳ ಹಿಂದಷ್ಟೆ ಸಕ್ರೆಬೈಲ್ ಬಿಡಾರಕ್ಕೆ ಭೇಟಿ ಕೊಟ್ಟು ಇಲ್ಲಿನ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದ್ದರು. ಅಲ್ಲದೆ ಅವರ ಸಮಸ್ಯೆಗಳನ್ನು ಆಲಿಸಿದ್ದ ಎಂ. ಶ್ರೀಕಾಂತ್, ಇಂದು ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಶ್ರೀಕಾಂತ್, ಲಾಕ್ಡೌನ್ನಿಂದಾಗಿ ವನ್ಯಜೀವಿಗಳು ಸಹ ಸಂಕಷ್ಟದಲ್ಲಿವೆ, ಆಹಾರಕ್ಕಾಗಿ ಈ ಭಾಗದ ರಸ್ತೆಬದಿಗಳಲ್ಲಿ ಬರುವ ವಾಹನಗಳನ್ನು ಎದುರು ನೋಡುತ್ತಿದ್ದ ಮಂಗಗಳು ಇದೀಗ ಊರುಗಳಿಗೆ ನುಗ್ಗುತ್ತಿವೆ. ಸಂಕಷ್ಟದ ಈ ಸಂದರ್ಭದಲ್ಲಿ ವನ್ಯಜೀವಿಗಳ ಹಸಿವು ನೀಗಿಸಬೇಕಾದ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ, ವಲಯ ಅರಣ್ಯಾಧಿಕಾರಿ ಶಿವರಾಜ್ ಮಠದ್, ವನ್ಯಜೀವಿ ವೈದ್ಯ ಡಾ.ವಿನಯ್, ಫಾರೆಸ್ಟ್ ಗಾರ್ಡ್ ಗೀತಾ, ಜಮೇದಾರ್ ಜಲೀಲ್ ಹಾಗೂ ವೈಲ್ಡ್ ಟಸ್ಕರ್ ಸಂಸ್ಥೆಯ ನಿರ್ದೇಶಕ ಜೇಸುದಾಸ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















