ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬದುಕಿನ ಯಶಸ್ಸಿನ ಅಭ್ಯುದಯಕ್ಕೆ ನಾಗರಿಕ ಕೌಶಲ್ಯತೆ ಎಂಬುದು ಅತ್ಯಗತ್ಯ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ.ವಿ.ಎಲ್.ಎಸ್ ಕುಮಾರ್ ಹೇಳಿದರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಸೋಮವಾರ ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಅಭ್ಯುದಯ’ ಓರಿಯಂಟೇಷನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪದವಿಧರರಾಗಿ ಹೊರಬರುತ್ತಿರುವ ಯುವ ಸಮೂಹದಲ್ಲಿ ಕೌಶಲ್ಯತೆಯ ಕೊರತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳು ಒಟಿಟಿ ವೇದಿಕೆಗಳು ಯುವ ಸಮೂಹವನ್ನು ಜ್ಞಾನದಲ್ಲಿ ಹಿಂದೆ ಹೋಗುವಂತೆ ಮಾಡುತ್ತಿದೆ. ಸಮಯದ ನಿರ್ವಹಣೆ, ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿ, ಉತ್ತಮ ಗುರಿ ಮತ್ತು ಭಾವನೆ ನಿಮ್ಮದಾಗಲಿ.

Also read: ರೌಡಿ ಶೀಟರ್ ಹಬೀಬುಲ್ಲಾ ಕಾಲಿಗೆ ಪೊಲೀಸ್ ಗುಂಡೇಟು | ಘಟನೆ ನಡೆದಿದ್ದು ಹೇಗೆ?
ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಕೆ.ನಾಗರಾಜ ಮಾತನಾಡಿ, ಪ್ರತಿದಿನವೂ ವಿದ್ಯಾರ್ಥಿಗಳಿಂದ ಹೊಸತನವನ್ನು ಕಲಿಯುವ ಅವಕಾಶ ಉಪನ್ಯಾಸಕರಿಗಿದೆ. ಧೃಡತೆಯೆ ನಮ್ಮ ಅಭ್ಯುದಯಕ್ಕೆ ಮೂಲ ಕಾರಣ. ಅಂತಹ ಯಶಸ್ಸಿಗೆ ದಾರಿ ದೀಪವಾಗಿ ವಿದ್ಯಾಸಂಸ್ಥೆ, ಉಪನ್ಯಾಸಕರು ಸಹಕಾರಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Discussion about this post