ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿಯ #Football League Tournament ಫೈನಲ್ ಸಮರದಲ್ಲಿ ಎಸ್. ಕೆ. ದಯಾ ಫ್ರೆಂಡ್ಸ್ ಕ್ಲಬ್ , ರೋಚಕ ಗೆಲುವು ಸಾಧಿಸುವ ಮೂಲಕ ಪ್ರತಿಷ್ಠಿತ ʼಪ್ರವೀಣ್ ಕಪ್ ʼಅನ್ನು ತನ್ನದಾಗಿಸಿಕೊಂಡಿತು.
ಎದುರಾಳಿ ಬಲಿಷ್ಟ ಮಲ್ನಾಡ್ ಕಿಕರ್ಸ್ ಕ್ಲಬ್ ಮೇಲೆ ದಯಾ ಫ್ರೆಂಡ್ಸ್ ಅಟಗಾರರು ಟೈ ಬ್ರೇಕರ್ ನಲ್ಲಿ 4-1 ಗೋಲುಗಳ ಮೂಲಕ ಗೆಲುವು ಸಾಧಿಸಿದರು. ಲೀಗ್ ನಲ್ಲಿ ಸಮರ್ಥವಾಗಿಯೇ ಆಡುತ್ತಾ ಬಂದಿದ್ದ ಮಲ್ನಾಡ್ ಕಿಕರ್ಸ್ ಫೈನಲ್ ನಲ್ಲಿ ಸಮರ್ಥ ಆಟವನ್ನೇ ಪ್ರದರ್ಶಿಸಿದರೂ, ಟೈ ಬ್ರೇಕರ್ ನಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು. ಇದರ ಪರಿಣಾಮ ಅದು ರನ್ನರ್ಸ್ ಆಗಿ ತೃಪ್ತಿ ಪಟ್ಟುಕೊಂಡಿತು.

Also read: ಯುದ್ದ ಗೆದ್ದ ನಾನು ಶಿವಮೊಗ್ಗದಲ್ಲಿ ತುಕ್ಕು ಹಿಡಿಯುತ್ತಿದ್ದೇನೆ, ದಾರಿ ತೋರಿಸಿ | ಸೇನಾ ಟ್ಯಾಂಕರ್ ಸ್ಥಿತಿಗತಿ
ದ್ವಿತೀಯಾರ್ಧದಲ್ಲಿ ಇಬ್ಬರೂ ತುಂಬಾನೆ ಹುರುಪಿನಿಂದ ಮೈದಾನಕ್ಕಿಳಿದರು. ಜಿನುಗು ಮಳೆಯ ನಡುವೆಯೇ ಬಿರುಸಿನ ಆಟದೊಂದಿಗೆ ಎರಡು ತಂಡದವರು ಬೆವರು ಹರಿಸಿದರೂ, ಇಬ್ಬರಿಗೂ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ, ನಾ ಮುಂದೆ, ತಾಮುಂದೆ ಎನ್ನುವಂತೆ ಇಬ್ಬರ ಸಮರ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಬಂತು. ಚೆಂಡಿನ ಮೇಲೆ ಯಾರೇ ಹಿಡಿತ ಸಾಧಿಸಿದರೂ, ಅವುಗಳನ್ನು ಗೋಲುಗಳಾಗಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಮಲ್ನಾಡ್ ಕಿಕರ್ಸ್ ಗೆ ಸಿಕ್ಕ ಕಾರ್ನರೆ ಪೆನಾಲ್ಟಿಯೂ ಕೂಡ ಗೋಲು ಗಳಿಸುವಲ್ಲಿ ಸಫಲವಾಗಲಿಲ್ಲ, ಆಟದ ಪೂರ್ಣಾವದಿಗೂ ಇಬ್ಬರೂ ಮತ್ತೆ ಗೋಲು ಇಲ್ಲದೆ ವಾಪಾಸ್ ಆದರು.

ಪಂದ್ಯದ ಮುಕ್ತಾಯ ಸಮಾರಂಭಕ್ಕೆ ಅತಿಥಿಗಳಾಗಿ ಬಂದಿದ್ದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರು, ವಿಜೇತರಿಗೆ ಮತ್ತು ರನ್ನರ್ಸ್ ಗೆ ಟ್ರೋಪಿ ಮತ್ತು ಮೆಡಲ್ ವಿತರಿಸಿದರು. ಅವರೊಂದಿಗೆ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮಖಂಡ ಆರ್. ಮೋಹನ್, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಶಶಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ಶ್ರೀನಾಥ್, ಗರ್ವನಿಂಗ್ ಬೋರ್ಡ್ ಮೆಂಬರ್ ಶಿವರಾಜ್, ಸಂಸ್ಥೆಯ ಉಪಾಧ್ಯಕ್ಷರಾದ ರಾಮಚಂದ್ರ ರಾವ್ ಪವಾರ್, ಜ್ಞಾನ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವಾಸ್, ಉಪ ಪ್ರಧಾನ ಕಾರ್ಯದರ್ಶಿಆರಿಫ್ ಅಹಮದ್, ಖಜಾಂಚಿ ಸೂಲಯ್ಯ, ಮ್ಯಾನೆಜಿಂಗ್ ಕಮಿಟಿ ಸದಸ್ಯರಾದ ಸೂಸೈ ನಾದನ್, ಎಲ್. ವಿಜಯ್ ಕುಮಾರ್,ಕ್ಲೈಮೆಂಟ್ ರಾಯನ್, ವಿನ್ಸೆಂಟ್ ರೊಡ್ರಿಗಸ್, ಮೈಕೆಲ್ ಕಿರಣ್, ಅರ್ಪುದ ಸ್ವಾಮಿ, ಕೆ. ಹರ್ಷ ಭೋವಿ, ತಂಗರಾಜ್ , ಪತ್ರಕರ್ತರಾದ ದೇಶಾದ್ರಿ ಹೊಸ್ಮನೆ, ಮಲ್ಲಪ್ಪ ಸಂಕಿನ್, ಗಾರಾ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post